Published
2 months agoon
By
Akkare News
30/06/2025 ರಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಭಾರತ್ ಬ್ಯಾಂಕ್ ಶಾಖೆಯಲ್ಲಿ ಬೀಳ್ಕೊಡುಗೆ ಸಮಾರಂಭ ವಿಜೃಂಭಣೆಯಿಂದ ನೆರವೇರಿತು. ಭಾಸ್ಕರ್ ಬಂಗೇರ ಕಳೆದ 01,05,1996 ರಿಂದ ಮುಂಬೈ ಮಹಾನಗರದ ಬಿಲ್ಲವರ ಅಸೋಸಿಯೇಷನ್ ಆಯೋಜಿಸಿದ ಭಾರತ್ ಬ್ಯಾಂಕ್ ಉದ್ಯೋಗಿಯಾಗಿ ಸುಮಾರು ಮೂರು ದಶಕ ಅವಧಿಯಲ್ಲಿ ಮುಂಬೈಯ ಮಹಾರಾಷ್ಟ್ರ, ಗುಜರಾತ್ ಹಾಗು ಕರ್ನಾಟಕದ ಬೆಂಗಳೂರು ಹೀಗೆ ಬೇರೆ ಬೇರೆ ರಾಜ್ಯಗಳ ಶಾಖೆಗಳಲ್ಲಿ ಸೇವೆ ಮಾಡಿದ ಅನುಭವ,ನಂತರ ದಕ್ಸಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ, ಹಂಪನಕಟ್ಟೆ, ಕಂಕನಾಡಿ ಕೂಡಿದಂತೆ 18 ಶಾಖೆಗಳಲ್ಲಿ , ಆ ಸಂದರ್ಭದಲ್ಲಿ ಹಲವು ಅಡೆ ತಡೆ ಗಳು ಬಂದರು ತನ್ನ ನಿಷ್ಠೆ ಹಾಗು ಪ್ರಾಮಾಣಿಕ ಸೇವೆಯೊಂದಿಗೆ ಅರೋಗ್ಯಕರ ಸೇವೆ ಸಲ್ಲಿಸಿದ ಶ್ರೇಯಸ್ಸು ಭಾಸ್ಕರ್ ರವರದು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಶಾಖೆ ಗಳ ವಿಭಾಗದ ಪ್ರಮುಖರಾದ ಶ್ರೀ.ಉದಯ ಸಾಲಿಯಾನ್.ಶ್ರೀ.ಶೇಖರ್ ಯು. ಪೂಜಾರಿ.ಪುತ್ತೂರು ಬ್ಯಾಂಕಿನ ಶಾಖಾ ಪ್ರಮುಖರಾದ ಶ್ರೀ ಸುಶಾಂತ್ ಡಿ. ಪೂಜಾರಿ, ಉಪ ಶಾಖಾ ಪ್ರಭಂದಕಿ ಯಾದ ಕುಮಾರಿ. ಸ್ವಾತಿ ಜಿ. ಸಾಲಿಯಾನ್, ಸಿಬ್ಬಂದಿಗಳಾದಶ್ರೀಮತಿ ಸ್ಮಿತಾ ಸಂಜಿತ್. ಪೂಜಾರಿ, ಶ್ರೀಮತಿ ಆರತಿ ಯಸ್. ಪೂಜಾರಿ, ಶ್ರೀಮತಿ. ಶ್ರುತಿ ಅಮರ್, ರಾಕೇಶ್ ಕೆ. ಸಾಲಿಯಾನ್, ಸಂದೀಪ್ ವಿ. ಅಮೀನ್ ದೇವೇಂದ್ರ ಶೆಟ್ಟಿ, ಶ್ರೀಮತಿ. ಚಿತ್ರವತಿ ಕುಲಾಲ್, ಉಪಸ್ಥಿತರಿದ್ದರು ಕಾರ್ಯಕ್ರಮ ಯಶಸ್ಸು ಆಗುವಲ್ಲಿ ಸಹಕರಿಸಿ ದರು.