Published
2 hours agoon
By
Akkare News
ಪುತ್ತೂರು: ಮುಖ್ಯ ರಸ್ತೆಯ ಮಹಿಳಾ ಠಾಣಾ ಮುಂಭಾಗದಲ್ಲಿ ಅರ್ಧ ಭಾಗ ತೆರವುಗೊಳಿಸಿ, ಅಪಾಯಕಾರಿ ಸ್ಥಿತಿಯಲ್ಲಿದ್ದ ಶತಮಾನದ ಹಳೆಯ ಕಟ್ಟಡವನ್ನು ಜೂ.12ರಂದು ತೆರವುಗೊಳಿಸಲಾಗಿದೆ.ಕಟ್ಟಡ ತೆರವಿನ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಯವರ ಅಭಿಪ್ರಾಯ ಕೇಳಿದಾಗ, ಇದೆಲ್ಲವೂ ಶ್ರೀ ಮಾಹಲಿಂಗೇಶ್ವರ ದೇವರ ಅನುಗ್ರಹ ಮತ್ತು ಅವರ ಪ್ರೇರಣೆಯಂತೆ ಎಲ್ಲವೂ ಸರಿಯಾದ ಸಮಯಕ್ಕೆ, ಸರಿಯಾಗಿ ಆಗುತ್ತದೆ ಎಂದು ತಿಳಿಸಿದರು.
ಮಹಿಳಾ ಠಾಣಾ ಮುಂಭಾಗದಲ್ಲಿರುವ ಹಳೆಯ ಕಟ್ಟಡವನ್ನು ಮಹಾಲಿಂಗೇಶ್ವರ ದೇವರ ಜಾತ್ರೆಯ ಸಂದರ್ಭದಲ್ಲಿ ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವದ ಕಿರುವಾಳು ಭಂಡಾರ ಆಗಮಿಸುವ ವೇಳೆ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟಡದ ಆರ್ಧ ಭಾಗವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿತ್ತು.