Published
1 hour agoon
By
Akkare News
ವಿಜಯನಗರ: ಫಿಟ್ನೆಸ್, ಇನ್ಶುರೆನ್ಸ್ ಇಲ್ಲದೇ ಓಡಾಟ ನಡೆಸುತ್ತಿದ್ದ ಖಾಸಗಿ ಶಾಲಾ ವಾಹನಗಳ ವಿರುದ್ಧ ವಿಜಯನಗರ ಜಿಲ್ಲೆಯ ಆರ್‌ಟಿಒ ಅಧಿಕಾರಿಗಳ ತಂಡ ಸಮರ ಸಾರಿದೆ. ವಿಶೇಷ ಕಾರ್ಯಾಚರಣೆ ನಡೆಸಿದ್ದು, ನೂರಾರು ವಾಹನಗಳನ್ನ ಜಪ್ತಿ ಮಾಡಿದೆ.
ಕಳೆದ ಫೆಬ್ರವರಿಯಿಂದ ಈವರೆಗೆ 103 ಪ್ರಕರಣಗಳು ದಾಖಲಾಗಿದ್ದು, 11 ಲಕ್ಷ ರೂ.ಗಿಂತಲೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ದಂಡ ಪಾವತಿಸಿದ ಬಳಿಕ ವಾಹನಗಳನ್ನ ಬಿಟ್ಟು ಕಳಿಸಲಾಗಿದೆ.