ಪುತ್ತೂರು: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಬಂಗಾರಡ್ಕ ನಿವಾಸಿ ವಿಶಾಲ್ ಇವರಿಗೆ “ಅರುಣ ಸಾರಥಿ” ಸಂಘಟನೆಯ ವತಿಯಿಂದ ‘10,000 ರೂಪಾಯಿ’ ಧನಸಹಾಯವನ್ನು “ಪುತ್ತಿಲ ಪರಿವಾರ ಸೇವಾ ಟ್ರಸ್ಟ್”ನ ಸಂಚಾಲಕರಾದ “ಅರುಣ್ ಕುಮಾರ್ ಪುತ್ತಿಲ’ ಅವರ ಉಪಸ್ಥಿತಿಯಲ್ಲಿ “ಹಿಂದವಿ” ಕಛೇರಿಯಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಸಂದೇಶ್ ನಾೖಕ್ ಕೆಯ್ಯೂರು,ಸಚಿನ್ ವಳತ್ತಡ್ಕ,ಸುರೇಶ್ ಬಂಗಾರಡ್ಕ,ಶಿವಪ್ರಸಾದ್ ಆಚಾರ್ಯ ಮುಕ್ರಂಪಾಡಿ,ಪ್ರಜ್ವಲ್ ಘಾಟೆ ಮೊದಲಾದವರು ಉಪಸ್ಥಿತರಿದ್ದರು “ಅರುಣ ಸಾರಥಿ” ಸಂಘಟನೆ ವತಿಯಿಂದ ಈವರೆಗೆ ಒಟ್ಟು 2,40,000 ರೂಪಾಯಿ ಧನಸಹಾಯವನ್ನು ಅನಾರೋಗ್ಯದಲ್ಲಿರುವವರಿಗೆ ನೀಡಲಾಗಿದೆ.