Connect with us

ಇತರ

63ರ ವಯಸ್ಸು… ಐವರು ಗೆಳತಿಯರು… ಅವರ ಐಷಾರಾಮಿ ಜೀವನಕ್ಕಾಗಿ ಕಳ್ಳತನ!

Published

on

ವಯಸ್ಸು 63 ದಾಟಿದರೂ ಚಾಳಿ ಮಾತ್ರ ಬದಲಾಗಲಿಲ್ಲ ಎನ್ನುವಂತೆ, ಐವರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ವೃದ್ಧನೊಬ್ಬ ಅವರ ದುಬಾರಿ ಖರ್ಚುಗಳನ್ನು ನಿಭಾಯಿಸಲು ಕೊನೆಗೆ ಕಳ್ಳತನದ ಹಾದಿ ಹಿಡಿದು ಪೊಲೀಸರ ಅತಿಥಿಯಾಗಿದ್ದಾನೆ! ಬಂಧಿತನನ್ನು 63 ವರ್ಷದ ಬಂಧು ಸಿಂಗ್ ಎಂದು ಗುರುತಿಸಲಾಗಿದೆ. ಪೊಲೀಸರ ವಿಚಾರಣೆ ವೇಳೆ ಈತನ ‘ಪಂಚ ಪ್ರೇಯಸಿಯರ’ ವಿಚಾರ ಬೆಳಕಿಗೆ ಬಂದಿದ್ದು, ಪ್ರಕರಣ ಕೇಳಿ ಅಧಿಕಾರಿಗಳೇ ಅಚ್ಚರಿಗೊಂಡಿದ್ದಾರೆ.ಐವರು ಮಹಿಳೆಯರೊಂದಿಗೆ ಸಂಬಂಧ! ಬಂಧು ಸಿಂಗ್ ಐವರು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅವರ ಜೀವನಶೈಲಿ, ಶೋಕಿ ಹಾಗೂ ದುಬಾರಿ ಬೇಡಿಕೆಗಳನ್ನು ಪೂರೈಸಲು ಆತ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇಬ್ಬರು ಮಹಿಳೆಯರಿಗೆ ಮಕ್ಕಳೂ! ಇವರಲ್ಲಿ ಇಬ್ಬರು ಮಹಿಳೆಯರು ಗರ್ಭ ಧರಿಸಿ ಮಕ್ಕಳಿಗೆ ಜನ್ಮ ನೀಡಿದ್ದರು ಎನ್ನಲಾಗಿದೆ. ಮಕ್ಕಳ ಪಾಲನೆ-ಪೋಷಣೆ ಸೇರಿದಂತೆ ಮಹಿಳೆಯರ ವಿವಿಧ ಬೇಡಿಕೆಗಳನ್ನು ಪೂರೈಸಲು ಬಂಧು ಸಿಂಗ್‌ಗೆ ದೊಡ್ಡ ಮೊತ್ತದ ಹಣದ ಅಗತ್ಯವಿತ್ತು. ಆದಾಯದ ಮೂಲವಿಲ್ಲ… ಕಳ್ಳತನವೇ ದಾರಿ! ಆದಾಯದ ಸೂಕ್ತ ಮೂಲವಿಲ್ಲದಿದ್ದರೂ ಐಷಾರಾಮಿ ಜೀವನವನ್ನು ಮುಂದುವರಿಸಬೇಕೆಂಬ ಆಸೆಯಿಂದ ಆತ ಕಳ್ಳತನಕ್ಕೆ ಇಳಿದಿದ್ದಾನೆ ಎನ್ನಲಾಗಿದೆ. ರಾತ್ರಿ ವೇಳೆ ವಿವಿಧ ಪ್ರದೇಶಗಳಲ್ಲಿ ಪಕ್ಕಾ ಯೋಜನೆ ರೂಪಿಸಿ ಕಳವು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ! ಇತ್ತೀಚೆಗೆ ಅಂಗಡಿಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಅಂಗಡಿ ಮಾಲೀಕ ಹಾಗೂ ಸ್ಥಳೀಯರು ಆತನನ್ನು ಹಿಡಿದಿದ್ದಾರೆ. ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬಂಧು ಸಿಂಗ್‌ನ ಐವರು ಗೆಳತಿಯರು ಹಾಗೂ ಅವರ ಖರ್ಚುಗಳನ್ನು ನಿಭಾಯಿಸಲು ಆತ ಕಳ್ಳತನ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಬಂಧು ಸಿಂಗ್‌ನನ್ನು ಬಂಧಿಸಿ, ಈ ಹಿಂದೆ ಆತ ಇನ್ನೆಷ್ಟು ಕಳ್ಳತನಗಳನ್ನು ಮಾಡಿದ್ದಾನೆ? ಯಾರ್ಯಾರ ಜೊತೆ ಸೇರಿಕೊಂಡಿದ್ದಾನೆ? ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ. 63ರ ವಯಸ್ಸಿನಲ್ಲೂ ‘ಲವ್ ಲೈಫ್’ ಮೆಂಟೇನ್ ಮಾಡಲು ಕಳ್ಳತನಕ್ಕೆ ಇಳಿದ ಕಥೆ ಕೇಳಿ ನಿಮಗೆ ಏನನಿಸಿತು?

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version