ಪುತ್ತೂರು: ದಿ.15: ಸೋಮವಾರ ಸಾರ್ವಜನಿಕರ ಶ್ರೀ ಗಣೇಶ ಶೋಭಾಯಾತ್ರೆ ಸಮಿತಿ ಕಲ್ಲಗುಡ್ಡೆ ಇವರ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ ಪಜಿಮಣ್ಣು ಇಲ್ಲಿನ ಗಣೇಶೋತ್ಸವದ ವೈಭವದ ಶೋಭಾಯಾತ್ರೆಯು ರಾತ್ರಿ ಸುಮಾರು 7,00ರ ಸಮಯಕ್ಕೆ ಮುಂಡೂರಿನಿಂದ ಕಲ್ಲಗುಡ್ಡೆಗೆ ಆಗಮಿಸಿತು ಸಂಜೆ ಗಂಟೆ 6.00ರಿಂದ ರಸಮಂಜರಿ – ಸುಶಾಂತ್ ಆಚಾರ್ಯ ಮತ್ತು ಬಳಗ ( ಗಾಯತ್ರಿ ಮ್ಯಾಸಿಕಲ್ಸ್, ಮುಂಡೂರು, ಪುತ್ತೂರು ) ನಡೆಯಿತು. ಸ್ಥಳೀಯ ಪ್ರತಿಭೆಗಳಿಗೆಸನ್ಮಾನ ಕಾರ್ಯಕ್ರಮ ನಡೆಯಿತು ಶಿಕ್ಷಣ ಕ್ಷೇತ್ರ (ಸ್ಥಳೀಯ ಪ್ರತಿಭೆಗಳು) ಯೋಗ ಉದ್ಯೋಗ ಕ್ಷೇತ್ರ (ಸ್ಥಳೀಯ ಯೋಗ ಶಿಕ್ಷಕರು) ಈ ಕಾರ್ಯಕ್ರಮದಲ್ಲಿ ಊರಿನ ಗಣ್ಯರು ಹಿರಿಯರು ಮತ್ತು ಉದ್ಯಮಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಸಂಗೀತ ರಸಮಂಜರಿ ಕಾರ್ಯಕ್ರಮದ ಪ್ರಾಯೋಜಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.