Published
57 minutes agoon
By
Akkare Newsಮಂಗಳೂರು: ಕರಾವಳಿ ಭಾಗದಲ್ಲಿ ಪ್ರಪ್ರಥಮ ಬಾರಿಗೆ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಗೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 18ರ ಮಹತ್ವದ ಸಭೆಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಂದು ದಿನ ಮುಂಚಿತವಾಗಿಯೇ, ಅಂದರೆ ಸೆಪ್ಟೆಂಬರ್ 17ರ ಸಂಜೆಯೇ ಕರಾವಳಿ ನಗರಿಗೆ ಬರಲಿದ್ದಾರೆ.
ಸಿಎಂ ಡಿ.ಕೆ. ಶಿವಕುಮಾರ್ ಅವರ ಮೂರು ದಿನಗಳ ಕರಾವಳಿ ಪ್ರವಾಸದ ವಿವರ
ದಿನ 1
ಸೆಪ್ಟೆಂಬರ್ 17 (ಗುರುವಾರ) – ಮಂಗಳೂರಿಗೆ ಆಗಮನ
ಸಂಜೆ 04:10: ಕಲಬುರಗಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ನಿರ್ಗಮನ.
ಸಂಜೆ 05:25: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಜಪೆ) ಆಗಮನ.
ರಾತ್ರಿ: ಮಂಗಳೂರಿನಲ್ಲಿ ವಾಸ್ತವ್ಯ.
ದಿನ 2
ಸೆಪ್ಟೆಂಬರ್ 18 (ಶುಕ್ರವಾರ) – ಸಂಪುಟ ಸಭೆ ಹಾಗೂ ಹೆಬ್ರಿ ಭೇಟಿ
ಬೆಳಗ್ಗೆ 10: ಮಂಗಳೂರಿನ ಪಡೀಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನೂತನ ಕಚೇರಿ ಸಂಕೀರ್ಣ ‘ಪ್ರಜಾಸೌಧ’ದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ಮತ್ತು ಸಭೆ.
ಮಧ್ಯಾಹ್ನ 02:30: ಮಂಗಳೂರಿನ ಮೇರಿಹಿಲ್ಸ್ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಉಡುಪಿ ಜಿಲ್ಲೆಯ ಹೆಬ್ರಿಗೆ ನಿರ್ಗಮನ.
ಮಧ್ಯಾಹ್ನ 03: ಹೆಬ್ರಿ ತಲುಪಿ, ಅಲ್ಲಿ ಬಹುಮುಖ್ಯವಾದ ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಮಹತ್ವದ ಸಭೆಯಲ್ಲಿ ಭಾಗಿ.
ಸಂಜೆ 05: ಹೆಬ್ರಿಯಿಂದ ಹೆಲಿಕಾಪ್ಟರ್ ಮೂಲಕ ಮರಳಿ ಮಂಗಳೂರಿಗೆ ಪ್ರಯಾಣ.
ಸಂಜೆ 05:30: ಮಂಗಳೂರಿನ ಮೇರಿಹಿಲ್ಸ್ ಹೆಲಿಪ್ಯಾಡ್‌ಗೆ ಆಗಮನ.
ರಾತ್ರಿ: ಮಂಗಳೂರಿನಲ್ಲೇ ವಾಸ್ತವ್ಯ.
ದಿನ 3
ಸೆಪ್ಟೆಂಬರ್ 19 (ಶನಿವಾರ) – ಮಲೆನಾಡು ಪ್ರವಾಸ, ಬೆಂಗಳೂರಿಗೆ ವಾಪಸ್
ಬೆಳಗ್ಗೆ 09:30: ಮಂಗಳೂರಿನ ಮೇರಿಹಿಲ್ಸ್ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ನಿರ್ಗಮನ.
ಬೆಳಗ್ಗೆ 10: ತೀರ್ಥಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನಕ್ಕೆ ಆಗಮನ ಹಾಗೂ ಕಸ್ತೂರಿರಂಗನ್ ವರದಿ ಕುರಿತ ಸಭೆಯಲ್ಲಿ ಭಾಗಿ.
ಮಧ್ಯಾಹ್ನ 12:30: ತೀರ್ಥಹಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿಗೆ ಪ್ರಯಾಣ.
ಮಧ್ಯಾಹ್ನ 01 ಶ್ರೀ ರಂಭಾಪುರಿ ಮಠದ ಆವರಣಕ್ಕೆ ಆಗಮನ ಹಾಗೂ ಕಸ್ತೂರಿರಂಗನ್ ವರದಿ ಕುರಿತ ಸಭೆ.
ಮಧ್ಯಾಹ್ನ 03: ಬಾಳೆಹೊನ್ನೂರಿನಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ನಿರ್ಗಮನ.
ಸಂಜೆ 04: ಬೆಂಗಳೂರಿನ ಹೆಚ್.ಎ.ಎಲ್ (HAL) ವಿಮಾನ ನಿಲ್ದಾಣಕ್ಕೆ ವಾಪಸ್.