Published
1 day agoon
By
Akkare News
ಕುಸ್ತಿ ಕ್ಷೇತ್ರದಲ್ಲಿ ‘ಮಹಾರಾಷ್ಟ್ರದ ಹುಲಿ’ (ಮಹಾರಾಷ್ಟ್ರಚಿ ವಾಘಿನ್) ಎಂದೇ ಖ್ಯಾತಿ ಪಡೆದಿದ್ದ ಅಶ್ವಿನ್ ಪೌಲ್, ತಮ್ಮ ಕ್ರೀಡಾ ಜೀವನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 5 ಚಿನ್ನ ಹಾಗೂ 6 ಬೆಳ್ಳಿ ಪದಕಗಳನ್ನು ಗೆದ್ದಿದ್ದರು.
ಈ ದುರಂತ ಘಟನೆಯು ಮಹಾರಾಷ್ಟ್ರದಾದ್ಯಂತ ಹಾಗೂ ಕ್ರೀಡಾ ವಲಯದಲ್ಲಿ ತೀವ್ರ ಆಘಾತ ಮತ್ತು ಶೋಕವನ್ನು ಉಂಟುಮಾಡಿದೆ. ಪತಿ ಮತ್ತು ಅತ್ತೆ-ಮಾವಂದಿರಿಂದ ನಿರಂತರವಾಗಿ ಎದುರಿಸುತ್ತಿದ್ದ ಮಾನಸಿಕ ಹಾಗೂ ದೈಹಿಕ ಕಿರುಕುಳವೇ ಈ ಕಠಿಣ ನಿರ್ಧಾರಕ್ಕೆ ಕಾರಣ ಎಂದು ಅಶ್ವಿನ್ ಅವರ ತಂದೆ ಆರೋಪಿಸಿದ್ದಾರೆ. ನಳದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.