Published
44 minutes agoon
By
Akkare News
ಮಂಗಳೂರು: ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದಕ್ಷಿಣ ಕನ್ನಡ, ಕರಾವಳಿ ಜಿಲ್ಲೆ ಸಾಮರಸ್ಯದ ನೆಲೆಯಾಗಿತ್ತು. ಜಾತಿ, ಮತ, ಧರ್ಮಗಳ ಭೇದ ಇಲ್ಲದೇ ಜನ ಒಗ್ಗಟ್ಟಾಗಿದ್ದರು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಸೋಲಾಗಬಾರದಿತ್ತು. ಇಲ್ಲಿ ವಿರೋಧ ಪಕ್ಷದವರು ಯಾವ ರೀತಿ ಗೆದ್ದುಕೊಂಡು ಬರುತ್ತಿದ್ದಾರೆ ಎನ್ನುವುದನ್ನು ಮತದಾರರು ನೋಡಿದ್ದಾರೆ. ಹಿಂದಿನ ಗತವೈಭವವ ಮತ್ತೆ ಮರುಕಳಿಸಬೇಕು. ಇಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಭಾರೀ ಅಭಿವೃದ್ಧಿ ಆಗಿತ್ತು ಎಂದು ನೂತನ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ ಹೇಳಿದ್ದಾರೆ,