Connect with us

ಇತರ

ಗೃಹಲಕ್ಷ್ಮಿ ಯೋಜನೆಯ ಎಫೆಕ್ಟ್…. ಸರಕಾರದ ನೂರು ದಿನದ ಕಾರ್ಯಕ್ರಮ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಸುಂದರಿ ಬದಿನಾರ್ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿ

Published

on

ಕೋಡಿಂಬಾಡಿ ಗ್ರಾಮದ ಬದಿನಾರು ನಿವಾಸಿ ಸುಂದರಿ ರಾಜ್ಯ ಮಟ್ಟದ ಸರಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತಾರೆ. ಬಡ ಕುಟುಂಬದ ಸುಂದರಿ ಯವರು ಗೃಹಲಕ್ಷ್ಮಿ ಯೋಜನೆ ಮೊದಲ ಕಂತುವಿನ ಹಣದಿಂದ ಒಂದು ಕರು ತೆಗೆದುಕೊಂಡು, ನಂತರ ದಿನದಲ್ಲಿ ಮತ್ತೆ 4 ದನ ಪಡೆದು ಕೊಂಡರು, ಪ್ರಸ್ತುತ ಸುಮಾರು 60 ಲೀಟರ್ ಹಾಲನ್ನು ಸೊಸೈಟಿ ಗೆ ಹಾಕಿ ಸ್ವಾವಲಂಬಿ ಜೀವನವನ್ನು ಮಾಡುತ್ತಿದ್ದಾರೆ.

ಇವರ ಈ ಸಾಧನೆಗೆ, ಇಂದು ಬೆಂಗಳೂರಿನ ವಿಧಾನ ಸೌಧದ ಸಭಾಂಗಣದಲ್ಲಿ ನಡೆದ,ಡಿ.ಕೆ ಶಿವಕುಮಾರ್ ಅವರ 100ನೇ ದಿನದ ಸರಕಾರದ ಸಾಧನೆಯ ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಯಾಗಿ ಭಾಗವಹಿಸುವ ಅವಕಾಶ ಲಭಿಸಿದೆ. ಇವರಿಗೆ ಕೋಡಿಂಬಾಡಿ ಗ್ರಾಮ ಪಂಚಾಯತ್ ಉದ್ಯೋಗಾ. ಖಾತರಿ ಯೋಜನೆಯಿಂದ ಹಟ್ಟಿ,ಶಾಸಕರಾದ ಅಶೋಕ್ ಕುಮಾರ್ ರೈ ಇವರಿಂದ ಹುಲ್ಲು ಕಟ್ಟಿಂಗ್ ಮಷೀನ್, ಹಟ್ಟಿ ಮ್ಯಾಟ್, ಮೊದಲಾದನ್ನು ಇಲಾಖೆ ಮೂಲಕ ಹೋದಗಿಸಲಾಗಿದೆ. ಇವರ ಈ ಸಾಧನೆಗೆ ಕೋಡಿಂಬಾಡಿ ಗ್ರಾಮ ಪಂಚಾಯತ್. ಮಾಜಿ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ,ಪುತ್ತೂರು ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಉಮಾನಾಥ್ ಶೆಟ್ಟಿ ಪೆರ್ನೆ, ಕೋಡಿಂಬಾಡಿ ಗ್ರಾಮ ಪಂಚಾಯತ್, ಕೋಡಿಂಬಾಡಿ ಅಂಗನವಾಡಿ ಕಾರ್ಯಕರ್ತರು,ಕೋಡಿಂಬಾಡಿ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತರು, ಸಂಜೀವಿನಿ ಸಂಘದವರು ಮತ್ತು ವಲಯ ಮೇಲ್ವಿಚಾರಕರಾದ ಯಶೋದವರು ಸಹಕರಿಸುತ್ತಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version