ಪುತ್ತೂರು ಶಾಸಕ ಶ್ರೀ ಅಶೋಕ್ ಕುಮಾರ್ ರೈ ಅವರ ಆದೇಶ ದ ಮೇರೆಗೆ ಹಾಗು ಬ್ಲಾಕ್ ಅಧ್ಯಕ್ಷರು ಶ್ರೀ ಕೃಷ್ಣಪ್ರಸಾದ್ ಆಳ್ವ ಅವರ ಸೂಚನೆ ಮೇರೆಗೆ ಆರ್ಯಪು ಗ್ರಾಮದ ಕೊಲ್ಯ ರಸ್ತೆ ಬದಿಯ ಬರೆ ಜರಿದ ಸ್ಥಳಕ್ಕೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಆರ್ಯಪು ವಲಯ ಕಾಂಗ್ರೆಸ್ ಸಮಿತಿ ಭೇಟಿ ನೀಡಿ ಆರ್ಯಪು ಪಂಚಾಯತಿ ಕಾರ್ಯದರ್ಶಿ ಶ್ರೀ ಮೋನಪ್ಪ ಹಾಗೂ ಪಂಚಾಯತ್ ಸಿಬ್ಬಂದಿ ಶೇಸಪ್ಪ ರವರನ್ನು ಕರೆಸಿ ಈಗ ತಾತ್ಕಾಲಿಕವಾಗಿ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಶರೂನ್ ಸಿಕ್ವೇರ ಹಾಗೂ ಕಚೇರಿ ಕಾರ್ಯದರ್ಶಿ ಜಾನ್ ಸಿರಿಲ್ ಹಾಗೂ ಆರ್ಯಪು ವಲಯ ಅಧ್ಯಕ್ಷರಾದ ಶ್ರೀ ಗಿರೀಶ್ ರೈ ಕೈಕಾರ ಹಾಗೂ ಬೂತ್ ಅಧ್ಯಕ್ಷರಾದ ಶ್ರೀ ಶಿವಪ್ರಸಾದ್ (ಅನ್ನಿ) ಇವರು ಹಾಗೂ ಸ್ಥಳೀಯರಾದ ಪದ್ಮನಾಭ ಹಾಗೂ ಸ್ಥಳೀಯ ನಿವಾಸಿಗಳು ಹಾಜರಿದ್ದರು.