Connect with us

ಇತರ

ಸುಳ್ಯ: ಕಲ್ಲುಗುಂಡಿಯ ಗಂಡನ ಮನೆಯಲ್ಲಿ ಅನುಮಾನಾಸ್ಪದ ಸಾವು – ಸಾರಪುಣಿಯ ನಿಶಾನಳ ನಿವಾಸಕ್ಕೆ ಪುತ್ತೂರು ಬಿಜೆಪಿ ನಿಯೋಗ ಭೇಟಿ

Published

on

ಸುಳ್ಯ: ಕಲ್ಲುಗುಂಡಿಯ ಗಂಡನ ಮನೆಯಲ್ಲಿ ಅನುಮಾನಾಸ್ಪದ ಸಾವು – ಸಾರಪುಣಿಯ ನಿಶಾನಳ ನಿವಾಸಕ್ಕೆ ಪುತ್ತೂರು ಬಿಜೆಪಿ ನಿಯೋಗ ಭೇಟಿ, ತೀವ್ರ ಸಂತಾಪ ಹಾಗೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹ ​ಸಾರಪುಣಿ: ಸುಳ್ಯ ತಾಲೂಕಿನ ಕಲ್ಲುಗುಂಡಿಯ ಗಂಡನ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಸಾರಪುಣಿಯ ನಿಶಾನಳ ಮನೆಗೆ ಪುತ್ತೂರಿನ ಪ್ರಮುಖ ಬಿಜೆಪಿ ನಿಯೋಗವು ಭೇಟಿ ನೀಡಿ, ದುಃಖತಪ್ತ ಕುಟುಂಬದವರಿಗೆ ಸಾಂತ್ವನ ಹೇಳಿದೆ. ಮೃತರ ಕುಟುಂಬಕ್ಕೆ ಧೈರ್ಯ ತುಂಬಿದ ನಾಯಕರು, ಘಟನೆಯ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಹಾಗೂ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ರತನ್ ರೈ, ರಾಜೇಶ್ ಪರ್ಪುಂಜ ಹಾಗೂ ಪ್ರಮುಖರಾದ ನಿತೀಶ್ ಕುಮಾರ್, ನಾರಾಯಣ ಪೂಜಾರಿ, ಕೃಷ್ಣ ಕುಮಾರ್, ನೇಮಿರಾಜ್, ರಕ್ಷಿತ್ ಇಡ್ಕಪೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version