ಕಾಂಗ್ರೆಸ್ ಮುಖಂಡ ನಿಗಮದ ಅಧ್ಯಕ್ಷ ಟಿ.ಎಂ.ಶಹೀದ್ ನಮ್ಮ ತಂದೆಯವರು ನೀಡಿರುವ ಚಿನ್ನ ಮತ್ತು ಆಸ್ತಿಯನ್ನು ಕಬಳಿಸಿ ನನಗೂ ಮತ್ತು ಮಕ್ಕಳಿಗೂ ಅನ್ಯಾಯ ಮಾಡಿದ್ದಾರೆ CM ಡಿಕೆಶಿ .ಅಲ್ಲ ಪಿ.ಎಂ ಮೋದಿಗೂ .ಹೇಳಿದರೂ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ನನಗೆ ನ್ಯಾಯ ಕೊಡಿಸಿ : ಟಿ.ಎಂ.ಶಹೀದ್ ತೆಕ್ಕಿಲ್ ರವರ ಪತ್ನಿ: ಶಮಾ ಶಹೀದ್
ಸುಳ್ಯ: ” ನನ್ನ ಪತಿ ಟಿ.ಎಂ.ಶಹೀದ್ ತೆಕ್ಕಿಲ್ ರವರು ನನ್ನ ಮದುವೆಯ ಸಂದರ್ಭದಲ್ಲಿ ನನ್ನ ತಂದೆ ನನಗಾಗಿ ನೀಡಿದ್ದ 110 ಪವನ್ ಚಿನ್ನ ಮತ್ತು ನನಗೆ ನೀಡಿರುವ ಆಸ್ತಿಯನ್ನು ಕಬಳಿಸಿ, ಇದೀಗ ನನಗೆ ಮತ್ತು ನನ್ನ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ. ಅದರ ಬಗ್ಗೆ ಅವರಲ್ಲಿ ಮಾತನಾಡಿದರೆ ‘ನೀನು ಸಿ.ಎಂ. ಅಲ್ಲ ಪಿ.ಎಂ. ಬಳಿ ಹೋದರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಹೇಳುತ್ತಿದ್ದಾರೆ” ಎಂದು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ.ಶಹೀದ್ ತೆಕ್ಕಿಲ್ ರವರ ಪತ್ನಿ ಶಮಾ ಶಹೀದ್ ರವರು ಜು. 8 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ಆರೋಪಿಸಿದ್ದಾರೆ. ” ನನಗೆ ನ್ಯಾಯ ಕೊಡಿಸಿ” ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ನನಗೂ ಶಹೀದ್ ರಿಗೂ ವಿವಾಹ ನಡೆದು 25 ವರ್ಷವಾಗಿದ್ದು ಇದೀಗ ಕಳೆದ 9 ವರ್ಷಗಳಿಂದ ನಾನು ಕಾಸರಗೋಡಿನಲ್ಲಿರುವ ನನ್ನ ತಾಯಿಯ ಮನೆಯಲ್ಲಿ ವಾಸವಾಗಿದ್ದೇನೆ. ವಿವಾಹ ನಡೆದ ದಿನದಿಂದಲೇ ಇವರ ಸ್ವಭಾವ ಸರಿ ಇಲ್ಲದೆ ನಮ್ಮಲ್ಲಿ ಪರಸ್ಪರ ಹೊಂದಾಣಿಕೆ ಕೊರತೆ ಆಗಿತ್ತು. ಬಳಿಕ ವಿಚ್ಛೇದನದ ಬಗ್ಗೆ ಕಾಗದ ಪತ್ರಗಳನ್ನು ಮಾಡಿ ಪರಸ್ಪರ ಸಹಿ ಹಾಕಿಕೊಂಡಿದ್ದೇವೆ. ಇದೀಗ ಕಾಸರಗೋಡು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಇಸ್ಲಾಂ ಪ್ರಕಾರ ಮಸೀದಿಗಳಲ್ಲಿ ತಲಾಕ್ ಕಾರ್ಯ ನಡೆಯಬೇಕಾಗಿದೆ. ಅದರ ಮುಂದುವರಿದ ಭಾಗವಾಗಿ ಪ್ರಯತ್ನಗಳು ಪ್ರಸ್ತುತ ನಡೆಯುತ್ತಿದೆ” ಎಂದು ಅವರು ತಮ್ಮ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು. ಅರಂತೋಡಿನಲ್ಲಿ ನನ್ನ ಹೆಸರಿನಲ್ಲಿರುವ ಆಸ್ತಿ ಮತ್ತು ಸೊತ್ತಿನ ವ್ಯವಹಾರದಲ್ಲಿ ಅವರು ಅವ್ಯವಹಾರ ಮಾಡಿದ್ದಾರೆ ಎಂದು ಹೇಳಿದ ಅವರು ಅದಕ್ಕೆ ಪೂರಕವಾಗಿರುವ ಹಲವು ತೆಕ್ಕಿಲ್ ಗ್ಯಾಸ್ ಏಜೆನ್ಸಿ ನನ್ನ ಹೆಸರಿನಲ್ಲಿ ಇದ್ದು , ಈ ವರೆಗೆ ಅದರ ಯಾವುದೇ ಲಾಭಾಂಶವನ್ನು ನನಗೆ ಅವರು ನೀಡಿಲ್ಲ. ಅಲ್ಲದೆ ನನ್ನ ಹೆಸರಿನಲ್ಲಿ ಇರುವ ಜಾಗದ ಕಟ್ಟಡದಿಂದ ಬರಬೇಕಾದ ಬಾಡಿಗೆ ಹಣವನ್ನು ಕೂಡ ನನಗೆ ಸರಿಯಾಗಿ ನೀಡುತ್ತಿಲ್ಲ. ಇದರ ಬಗ್ಗೆ ದೊಡ್ಡ ದೊಡ್ಡ ರಾಜಕಾರಣಿಗಳ ಮೂಲಕ ಮಾತುಕತೆ ಮಾಡಿದ್ದು 75 ಲಕ್ಷ ರೂ. ಕೊಡುವುದಾಗಿ ಒಂದು ಅವರು ಹೇಳಿದ್ದರು. ಆದರೆ ಅದರಲ್ಲಿ ರೂ 25 ಲಕ್ಷಗಳನ್ನು ಮಾತ್ರ ಕೊಟ್ಟಿದ್ದು ಬಾಕಿ ಇರುವ ಮೊತ್ತವನ್ನು ಇನ್ನೂ ಕೊಟ್ಟಿಲ್ಲ. ಚಿನ್ನದ ರೇಟ್ ಈಗಿನ ಕಾಲಕ್ಕೆ ಹೋಲಿಸಿದರೆ ಈಗ ಒಂದು ಕೋಟಿಗೂ ಹೆಚ್ಚು ಹಣ ಚಿನ್ನದಲ್ಲಿ ಕೊಡಬೇಕು. ಇದೀಗ ಅವರು ಅದನ್ನು ನೀಡಲು ಒಪ್ಪುತ್ತಿಲ್ಲ. ನನಗೆ ನನ್ನ ಮಕ್ಕಳ ಶಿಕ್ಷಣ ಮತ್ತು ನಮ್ಮ ಜೀವನದ ನಿರ್ವಹಣೆ ಕಷ್ಟಕರವಾಗಿದ್ದು ನನಗೆ ನ್ಯಾಯ ಸಿಗಬೇಕು. ಈ ಬಗ್ಗೆ ಮಾತನಾಡಿದರೆ, ನಿನಗೆ ಏನು ಮಾಡಲೂ ಸಾಧ್ಯವಿಲ್ಲ. ನೀನು ಏನು ಬೇಕಾದರೂ ಮಾಡು. ನಾನು ಹೆದರುವುದಿಲ್ಲ ” ಎಂದು ನನ್ನನ್ನು ಭಯಪಡಿಸುತ್ತಿದ್ದಾರೆ. ಆದ್ದರಿಂದ ನನಗೆ ನ್ಯಾಯ ದೊರಕಿಸಿಕೊಡಬೇಕು ” ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು