Published
1 hour agoon
By
Akkare News


ಮೂಲ್ಕಿ ಶಾಂಭವಿ ನದಿ ದಕ್ಷಿಣ ಭಾಗದಲ್ಲಿ ನ. 9ರ ಸಂಜೆ/ರಾತ್ರಿ ಬಲೀಂದ್ರ ಪೂಜೆ ಆಚರಣೆ ಇದೆ. ನ. 6ರಂದು ಧನ್ವಂತರಿ ಜಯಂತಿ – ಧನತ್ರಯೋದಶಿಯಾಗಿದೆ. ನ. 6ರಂದು ಸಂಜೆ ಶ್ರೀಕೃಷ್ಣಮಠ, ಅಷ್ಟಮಠ, ಕೆಲವು ಮನೆಗಳಲ್ಲಿ ಯಮದೀಪವನ್ನು (ಅಪಮೃತ್ಯು ನಿವಾರಣೆಗೆ ಕಬ್ಬಿಣದ ಉಪಕರಣದಲ್ಲಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ದೀಪ ಇಡುವುದು) ಹಚ್ಚುವ ಸಂಪ್ರದಾಯವಿದೆ.





