Published
1 hour agoon
By
Akkare News

ಸಂಘಟಿತ ಕಾರ್ಯತಂತ್ರದೊಂದಿಗೆ ಚುನಾವಣಾ ಸಿದ್ಧತೆಗೆ ಆದ್ಯತೆ – ಅನ್ವರ್ ಸಾದತ್ ಬಜತ್ತೂರು ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿ, ಮುಂಬರುವ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕ್ಷೇತ್ರದ ಪ್ರತಿಯೊಂದು ಹಂತದಲ್ಲೂ ಸಂಘಟಿತವಾಗಿ ಕಾರ್ಯನಿರ್ವಹಿಸುವ ಅಗತ್ಯವನ್ನು ವಿವರಿಸಿದರು. ಪಕ್ಷದ ಕಾರ್ಯಕರ್ತರು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸ್ಥಳೀಯ ಸಮಸ್ಯೆಗಳು ಮತ್ತು ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಮೂಲಕ ಸಂಘಟನೆಯ ಚಟುವಟಿಕೆಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಪಕ್ಷದ ಚುನಾವಣಾ ಪೂರ್ವಸಿದ್ಧತೆ, ಸಂಘಟನಾತ್ಮಕ ಚಟುವಟಿಕೆಗಳು, ಕ್ಷೇತ್ರಮಟ್ಟದ ಕಾರ್ಯತಂತ್ರಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದೀಕ್ ಪುತ್ತೂರು ಮತ್ತು ಶಬೀರ್, ಜಿಲ್ಲಾ ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ ಹಾಗೂ ಶಾಕಿರ್ ಅಲಕೆಮಜಲು, ಚುನಾವಣಾ ಉಸ್ತುವಾರಿ ಸಿದ್ದೀಕ್ ಅಲೆಕ್ಕಾಡಿ, ಪುತ್ತೂರು ಕ್ಷೇತ್ರ ಸಮಿತಿ ಉಪಾಧ್ಯಕ್ಷ ಶಂಸುದ್ದೀನ್ ಈಶ್ವರಮಂಗಿಲ, ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಎ.ಕೆ., ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪುತ್ತೂರು ಹಾಗೂ ಕ್ಷೇತ್ರ ಚುನಾವಣಾ ಉಸ್ತುವಾರಿ ಜುನೈದ್ ಸಾಲ್ಮರ ಉಪಸ್ಥಿತರಿದ್ದರು.






