ಮಂಗಳೂರು::ಅಕ್ಟೋಬರ್ 09: ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ನೆರೆಯ ಮಲೆನಾಡು ಭಾಗದ ಪ್ರಸಿದ್ಧ ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಮತ್ತು ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗವು ಸಿಹಿ ಸುದ್ದಿ ನೀಡಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಬರೋಬ್ಬರಿ 5 ವಿಶೇಷ ‘ದಸರಾ ಏಕದಿನ ಪ್ರವಾಸ ಪ್ಯಾಕೇಜ್’ ಸೇವೆಗಳನ್ನು ಪ್ರಕಟಿಸಲಾಗಿದೆ.ಈ ವಿಶೇಷ ದಸರಾ ಬಸ್‌ಗಳ ಸೇವೆಯು ಅಕ್ಟೋಬರ್ 11 ರಿಂದ ಅಕ್ಟೋಬರ್ 20 ರವರೆಗೆ ಲಭ್ಯವಿರಲಿದ್ದು, ಸಾರ್ವಜನಿಕರು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡ ಸೀಟು ಕಾಯ್ದಿರಿಸಬಹುದಾಗಿದೆ ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ದಸರಾ ‘ನವದುರ್ಗಾ ದರ್ಶನ’ ಪ್ಯಾಕೇಜ್ಸಮಯ: ಬೆಳಿಗ್ಗೆ 8:00 ಗಂಟೆಗೆ ಮಂಗಳೂರು ಬಸ್ ನಿಲ್ದಾಣದಿಂದ ಹೊರಟು, ರಾತ್ರಿ 8:30 ಕ್ಕೆ ಮರಳಿ ಆಗಮಿಸಲಿದೆ.ಸಂದರ್ಶಿಸುವ ತಾಣಗಳು: ಮಾರೋಳಿಯ ಸೂರ್ಯ ನಾರಾಯಣ ದೇವಸ್ಥಾನ, ಬೋಳಾರದ ಮಾರಿಅಮ್ಮ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಹೊಸನಾಡಿನ ಕೊಡಿಯಾಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಸಸಿಹಿತ್ಲು ಭಗವತಿ ದೇವಸ್ಥಾನ, ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ, ಉರ್ವ ಮಾರಿಅಮ್ಮ ದೇವಸ್ಥಾನ ಹಾಗೂ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ.ಟಿಕೆಟ್ ದರ: ಹಿರಿಯರಿಗೆ (Adults) 500 ರೂ, ಮಕ್ಕಳಿಗೆ (6 ರಿಂದ 12 ವರ್ಷ) 400 ರೂ.ಸಮಯ: ಬೆಳಿಗ್ಗೆ 7:00 ಗಂಟೆಗೆ ನಿರ್ಗಮಿಸಿ, ರಾತ್ರಿ 9:30 ಕ್ಕೆ ಮಂಗಳೂರಿಗೆ 
ವಾಪಸ್.ಸಂದರ್ಶಿಸುವ ತಾಣಗಳು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ತಲಕಾವೇರಿ ದೇವಸ್ಥಾನ, ಭಾಗಮಂಡಲ ಭಾಗಂಡೇಶ್ವರ ದೇವಸ್ಥಾನ, ತ್ರಿವೇಣಿ ಸಂಗಮ, ಅಬ್ಬಿ ಜಲಪಾತ ಹಾಗೂ ರಾಜಾಸೀಟ್ (ಮಡಿಕೇರಿ).ಟಿಕೆಟ್ ದರ: ಹಿರಿಯರಿಗೆ 600, ಮಕ್ಕಳಿಗೆ 500 ರೂ.ಮಂಗಳೂರು – ಕೊಲ್ಲೂರು ಕ್ಷೇತ್ರ ದರ್ಶನ ಪ್ಯಾಕೇಜ್ಸಮಯ: ಬೆಳಿಗ್ಗೆ 8:00 ಗಂಟೆಗೆ ನಿರ್ಗಮಿಸಿ, ರಾತ್ರಿ 8:00 ಕ್ಕೆ ವಾಪಸ್.ಸಂದರ್ಶಿಸುವ ತಾಣಗಳು: ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ, ಕಾಪು ಮಾರಿಅಮ್ಮ ದೇವಸ್ಥಾನ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹಾಗೂ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ.ಟಿಕೆಟ್ ದರ: ಹಿರಿಯರಿಗೆ 600, ಮಕ್ಕಳಿಗೆ 500 ರೂ.ಮಂಗಳೂರು – ಸಿಗಂಧೂರು ಕ್ಷೇತ್ರ ದರ್ಶನ ಪ್ಯಾಕೇಜ್ಸಮಯ: ಬೆಳಿಗ್ಗೆ 7:00 ಗಂಟೆಗೆ ನಿರ್ಗಮಿಸಿ, ರಾತ್ರಿ 7:30 ಕ್ಕೆ ವಾಪಸ್.ಸಂದರ್ಶಿಸುವ ತಾಣಗಳು: ಕುಂದಾಪುರ, ಸಿಗಂಧೂರು ಚೌಡೇಶ್ವರಿ ದೇವಸ್ಥಾನ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ.ಟಿಕೆಟ್ ದರ: ಹಿರಿಯರಿಗೆ 700, ಮಕ್ಕಳಿಗೆ 600 ರೂ.ಮಂಗಳೂರು – ಶೃಂಗೇರಿ ದಸರಾ ಪ್ಯಾಕೇಜ್ಸಮಯ: ಬೆಳಿಗ್ಗೆ 8:00 ಗಂಟೆಗೆ ನಿರ್ಗಮಿಸಿ, ರಾತ್ರಿ 7:30 ಕ್ಕೆ ವಾಪಸ್.


ಸಂದರ್ಶಿಸುವ ತಾಣಗಳು: ಕೊಡಿಯಾಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿ ಶಾರದಾಂಬೆ ದೇವಸ್ಥಾನ, ಹರಿಹರಪುರ ಮಠ, ಕಿಗ್ಗಾದ ಋಷ್ಯಶೃಂಗೇಶ್ವರ ದೇವಸ್ಥಾನ.ಟಿಕೆಟ್ ದರ: ಹಿರಿಯರಿಗೆ 600, ಮಕ್ಕಳಿಗೆ 500 ರೂ.ಸಂಪರ್ಕ ಹಾಗೂ ಮುಂಗಡ ಬುಕಿಂಗ್ ವಿವರಗಳು:ವಿಶೇಷ ಪ್ರವಾಸದ ಮುಂಗಡ ಆನ್‌ಲೈನ್ ಬುಕಿಂಗ್‌ಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿ ಹಾಗೂ ನೇರ ಬುಕಿಂಗ್‌ಗೆ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:ಮುಂಗಡ ಬುಕಿಂಗ್ ಕೌಂಟರ್ (ಮಂಗಳೂರು): 9663211553ಮಂಗಳೂರು ಘಟಕ-1 ವ್ಯವಸ್ಥಾಪಕರು: 7760990713ಮಂಗಳೂರು ಘಟಕ-3 ವ್ಯವಸ್ಥಾಪಕರು: 7760990723ಮಂಗಳೂರು ಬಸ್ ನಿಲ್ದಾಣ ವಿಚಾರಣೆ: 7760990720ವಿಭಾಗೀಯ ಕಚೇರಿ: 7760990711 / 9663266221
