Published
13 hours agoon
By
Akkare News

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಭಾರ ಉಪಪ್ರಾಂಶುಪಾಲರಾದ ನಾಗರಾಜ್ ಭಟ್ ಪಿ ವಹಿಸಿದ್ದರು. ವಿದ್ಯಾರ್ಥಿಗಳಿಗೆ ದತ್ತಿನಿಧಿಯನ್ನು ವಿತರಣೆಯನ್ನು ಮಾಡಿ ಮಾತನಾಡಿದ ಡಾ. ಸಿ ವಿ.ಕಾಮತ್ ರವರು ” ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ತಮ್ಮ ಬದುಕಿನ ಸಾಧನೆಯ ಹಾದಿಯಲ್ಲಿ ಅಳವಡಿಸಿಕೊಳ್ಳಬೇಕು. ಹಾಗಿದ್ದಾಗ ಅವರ ನೈತಿಕ ಪ್ರಜ್ಞೆಯು ಹೆಚ್ಚು ಸ್ಫುಟಗೊಳ್ಳುತ್ತದೆ. ನೀವೆಲ್ಲರೂ ಪುತ್ತೂರಿನ ಮುತ್ತುಗಳಿದ್ದಂತೆ.
ಮುತ್ತಿನಂತೆ ಹೊಳಪು, ಶುದ್ಧತೆ, ತಾಳ್ಮೆ, ವಿಶಿಷ್ಟತೆ,ಸಮಾಜಕ್ಕೆ ಮೌಲ್ಯ ತುಂಬುವ ಗುಣಗಳನ್ನು ಹೊಂದಬೇಕು ” ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಟ್ರಸ್ಟ್ ನ ಸಂಯೋಜಕರಾದ ಚೇತನ್ ಹಾಗೂ ದಿನೇಶ್ ಕಾಮತ್ ಉಪಸ್ಥಿತರಿದ್ದರು.

ಶಾಲಾ ಪ್ರಭಾರ ಉಪಪ್ರಾಂಶುಪಾಲರಾದ ನಾಗರಾಜ್ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಕುಸುಮಾವತಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಕ್ಷಮಾ ಭಟ್ ಹಾಗೂ ಸ್ಮೃತಿ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಗೀತಾಂಜಲಿ ವಂದಿಸಿದರು.




