Connect with us

ಸ್ಥಳೀಯ

ಪ್ರೇಮದ ಊರಲಿ ಹೆಸರೇ ಹೇಳುವಂತೆ ಈ ಸಿನಿಮಾದಲ್ಲಿ ಪ್ರೀತಿ ಪ್ರೇಮ ಬಿಟ್ಟು ಬೇರೆ ಏನು ಕಾಣಲು

Published

on

ಸಾಧ್ಯವಿಲ್ಲ… ಅದು ಎಂತಾ ಪ್ರೀತಿ ಎಂದರೆ, ಅಪ್ಪ ಮಗನ ಪ್ರೀತಿ.. ಅಣ್ಣಾ ತಂಗಿ ಪ್ರೀತಿ.. ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಆಗದೇ.. ತಾನು ಪ್ರೀತಿಸಿದ ಹುಡುಗ ಮತ್ತೊಂದು ಹೆಣ್ಣನ್ನು ಮದುವೆ ಮಾಡಿ ಬರುವಾಗ ಆ ಹುಡುಗಿ ಅನುಭವಿಸುವ ನೋವಿನ ಪ್ರೀತಿ.. ಪ್ರೀತಿಯ ನೋವು.. ವಾವ್..

ಸ್ನೇಹಿತರೇ, ಎಲ್ಲು ನೋಡಿದರೂ ಇದರದ್ದೇ ಮಾತು..ಎಲ್ಲು ಕೇಳಿದರೂ ಇದರದ್ದೇ ಹಾಡು..” ಪ್ರೇಮದ ಊರಲಿ” ಈ ಹೆಸರು ಈಗ ತುಂಬಾ ಟ್ರೆಂಡಿಂಗ್ ನಲ್ಲಿ ಇದೆ.. ಹಾಗೆ ಇಷ್ಟೊಂದು ಪ್ರಚಾರ ಪಡೆದಿರುವ ಸಿನಿಮಾ ನೋಡಲೇ ಬೇಕು ಎಂದು ಕುಟುಂಬ ಸಮೇತರಾಗಿ ಹೋಗಿ ನೋಡಿ ಕೊಂಡು ಬಂದೆ… ಮೊತ್ತ ಮೊದಲು ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ನಾನು ಕೈ ಎತ್ತಿ ಮುಗಿಯುತ್ತೇನೆ ಅದೇ ಮಾಸ್ ಸಿನಿಮಾ ನೋಡಿ.. ನೋಡಿ..ಚಿಟ್ಟು ಹಿಡಿದು ಹೋದ ಮನಸಿಗೆ ಮುದ ನೀಡುವ ಸಿನಿಮಾ” ಪ್ರೇಮದ ಊರಲಿ ” .. ಅಪ್ಪಟ ಹಳ್ಳಿ ಸೊಗಡಿನ, ತಾಜಾ ಪ್ರೀತಿ ಪ್ರೇಮದ ಕಥಾ ಹಂದರ ಉಳ್ಳ ಸಿನಿಮಾ” ಪ್ರೇಮದ ಊರಲಿ ” ..

ಕಿವಿಗೆ ಹಾಯ್ ಎನಿಸುವ ಹಿನ್ನೆಲೆ ಸಂಗೀತ, ಕಣ್ಣಿಗೆ ಮುದ ನೀಡುವ ಸಿನಿಮಾಟೋಗ್ರಫಿ.. ಈ ಸಿನಿಮಾ ನೋಡ್ತಾ ಇರ್ಬೇಕಾದ್ರೆ, ನಾವೇ ಆ ಹಳ್ಳಿಯಲ್ಲಿ ಇದ್ದೇವೇನೋ ಎಂದು ಬಿಡುತ್ತದೆ.. ಅಷ್ಟು ಸುಂದರವಾಗಿ ಹಳ್ಳಿ, ಅಲ್ಲಿನ ಹಸಿರನ್ನು ತೋರಿಸಿದ್ದಾರೆ.. ನವಿರಾದ ಕಥಾ ಹಂದರ, ಇಂಪಾದ ಸಂಗೀತ, ಎಲ್ಲೂ ಅತಿರೇಕದ ಹಾಸ್ಯ ಇಲ್ಲ, ಅತಿರೇಕದ ಸಂಗೀತ ಇಲ್ಲ, ಅತಿರೇಕದ ಅಭಿನಯ ಇಲ್ಲ.. ಎಲ್ಲವೂ ಎಷ್ಟು ಬೇಕೋ ಅಷ್ಟು.. ಅದೇ ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತದೆ… ಈ ಸಿನಿಮಾದ ಮುಖ್ಯ ಜೀವಾಳ ನಾಗಣ್ಣ ಪಾತ್ರ ಮಾಡಿದ ರಂಗಾಯಣ ರಘು.. ಯಪ್ಪಾ ದೇವ್ರೆ ಇಡೀ ಸಿನಿಮಾವನ್ನು ತಿಂದಾಕಿದ್ದಾರೆ.. ಸಿನಿಮಾ ಮುಗಿಸಿ ಹೊರ ಬಂದ ನಂತರವೂ ” ವಸಂತ” ನೆನಪಾಗಿ ಉಳಿಯುತ್ತಾಳೆ.. ಎಲ್ಲಾ ಹೊಸ ನಾಯಕ ನಾಯಕಿಯರೇ.. ಕಿರು ತೆರೆಯ ಮೇಲೆ ಅಭಿನಯಿಸಿ ಹಿರಿ ತೆರೆಯಲ್ಲಿ ಹಿರಿತನವನ್ನೇ ಮೆರೆದಿದ್ದಾರೆ.. ಅಷ್ಟು ಸಹಜವಾಗಿ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ..

ಒಂದೇ ಒಂದು ಈ ಸಿನಿಮಾದ ಋಣಾತ್ಮಕ ಅಂಶ ಏನೆಂದರೆ, ಈ ಸಿನಿಮಾದಲ್ಲಿ ಬರುವ ಇಳಾ ವಿಟ್ಲ ಇವರ ಅಜ್ಜಿ ಪಾತ್ರ..ಅಭಿನಯ ಏನೋ ಚೆನ್ನಾಗಿದೆ.. ಆದರೆ ಮೇಕಪ್ ಮಾತ್ರ ತುಂಬಾ ಕೆಟ್ಟದಾಗಿದೆ.. ಒಟ್ಟಿನಲ್ಲಿ ” ಪ್ರೇಮದ ಊರಲಿ” ಹಂಡ್ರೆಡ್ ಪರ್ಸೆಂಟ್ ಪೈಸಾ ವಸೂಲ್ ಸಿನಿಮಾ.. ಇಡೀ ಫ್ಯಾಮಿಲಿ ಸಮೇತ ಒಟ್ಟಿಗೆ ಕೂತು ನೋಡಬಹುದಾದ ಸಿನಿಮಾ.. ಯಾವುದಕ್ಕೂ ಒಮ್ಮೆ ಹೋಗಿ ನೋಡಿ ಕೊಂಡು ಬನ್ನಿ..

 

Continue Reading
Click to comment

Leave a Reply

Your email address will not be published. Required fields are marked *

Advertisement