Connect with us

ಇತರ

ಪುತ್ತೂರು ಶಾಸಕ,ರಾಜ್ಯ ಸರಕಾರ ಮತ್ತು ಗೃಹ ಸಚಿವರ ಬಗ್ಗೆ ತಪ್ಪು ಗ್ರಹಿಕೆ ಚಿತ್ರ : ಮಹೇಶ್ ವಿಕ್ರಂ ಹೆಗಡೆ ವಿರುದ್ಧ ಪುತ್ತೂರು ಆರಕ್ಷಕ ಠಾಣೆಗೆ ದೂರು

Published

on

ಪುತ್ತೂರು, ದಿನಾಂಕ :17-07-2026: ಸಾಮಾಜಿಕ ಜಾಲತಾಣಗಳಲ್ಲಿ ಪುತ್ತೂರು ಶಾಸಕರನ್ನು ಅವಹೇಳನಕಾರಿಯಾಗಿ ಚಿತ್ರಿಸಿ, ರಾಜ್ಯ ಸರಕಾರ ಮತ್ತು ಗೃಹ ಸಚಿವರ ಬಗ್ಗೆ ತಪ್ಪು ಗ್ರಹಿಕೆ ಮೂಡಿಸುವ ರೀತಿಯಲ್ಲಿ ಪ್ರಚಾರ ಮಾಡಿದ ಆರೋಪದ ಮೇಲೆ ಮಹೇಶ್ ವಿಕ್ರಂ ಹೆಗಡೆ ವಿರುದ್ಧ ಪುತ್ತೂರು ಆರಕ್ಷಕ ಠಾಣೆಗೆ ದೂರು ದಾಖಲಾಗಿಗೆ ಪುತ್ತೂರು ಬ್ಲಾಕ್ ಅಧ್ಯಕ್ಷರ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರು ಸುಪ್ರೀತ್ ಕಣ್ಣಾರಾಯ ಅವರು ಈ ದೂರು ನೀಡಿದ್ದಾರೆ.
ದೂರಿನಲ್ಲಿ ಬಂಟ್ವಾಳದಲ್ಲಿ ನಡೆದ ಹೇಯ ಕೃತ್ಯಕ್ಕೆ ಪುತ್ತೂರು ಶಾಸಕರ ಕುಮ್ಮಕ್ಕು ಇದೆ ಎಂಬ ಅರ್ಥ ಬರುವಂತೆ ಬರಹಗಳು ಮತ್ತು ಭಾವಚಿತ್ರಗಳನ್ನು ದುರುಪಯೋಗಪಡಿಸಿಕೊಂಡು ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದು ಜನರಲ್ಲಿ ಶಾಸಕರು, ಸರಕಾರ ಮತ್ತು ಗೃಹ ಮಂತ್ರಿಗಳ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತಿದೆ ಎಂದು ತಿಳಿಸಲಾಗಿದೆ. ದೂರುದಾರರು ಕಾನೂನು ಕ್ರಮ ಜರುಗಿಸುವಂತೆ ವಿನಂತಿಸಿದ್ದಾರೆ. ಈ ಸಂಧರ್ಭದಲ್ಲಿ ಪುಡಾ ಅದ್ಯಕ್ಷರಾದ ಅಮಳ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ರವಿಪ್ರಸಾದ್ ಶೆಟ್ಟಿ, ಶರೋನ್ ಸಿಕ್ವೇರಾ, ಸೌರಭ್ ರೈ, ಸಾಮಾಜಿಕ ಜಾಲತಾಣದ ಪುತ್ತೂರು ಬ್ಲಾಕ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಪೃಥ್ವಿರಾಜ್, ಅಕ್ರ ಸಕ್ರಮ ಸಮಿತಿಯ ಸದಸ್ಯರಾದ ರಾಮಣ್ಣ ಪಿಲಿಂಜ, ಪ್ರಚಾರ ಸಮಿತಿಯ ಅದ್ಯಕ್ಷರಾದ ಅಮರನಾಥ ಗೌಡ, ಬ್ಲಾಕ್ ಕಾರ್ಯದರ್ಶಿ ಗಂಗಾದರ್ ಶೆಟ್ಟಿ ಎಲಿಕ್ಕ, ವಲಯಾಧ್ಯಕ್ಷರಾದ ಧೀರಜ್ ಗೌಡ ಕೊಡಿಪ್ಪಾಡಿ ಮತ್ತು ಗಿರೀಶ್ ರೈ ಆರ್ಯಪು , ಅಶೋಕ್ ಪಾಯಸ್, ಪ್ರಶಾಂತ್ ಮುರಾ ಉಪಸ್ಥಿತರಿದ್ದರು.
  •  

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version