Connect with us

ಇತರ

ಶ್ರೀಕಾಂತ್ ‌ಪೂಜಾರಿ ಬಿರಾವು ರವರಿಗೆ ರಾಷ್ಟ್ರೀಯ ಯೂತ್ ಐಕಾನ್ ಪ್ರಶಸ್ತಿ 2026

Published

on

ಪುತ್ತೂರು : ಕಳೆದ ಹಲವಾರು ವರ್ಷಗಳಿಂದ ಯುವಜನರ ಸಬಲೀಕರಣದಲ್ಲಿ ತೊಡಗಿಸಿಕೊಂಡಿರುವ ಶ್ರೀಕಾಂತ್ ಪೂಜಾರಿ ಬಿರಾವು ರವರಿಗೆ 2026 ನೇ ಸಾಲಿನ ರಾಷ್ಟ್ರೀಯ ಯೂತ್ ಐಕಾನ್ ಪ್ರಶಸ್ತಿ ಗೆ ಆಯ್ಕೆ ಸಮಿತಿ ಆಯ್ಕೆ ಮಾಡಿದೆ.ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಯುವ ಜನರಿಗೆ ವಿವಿಧ ಶಾಲಾ ಕಾಲೇಜು, ಯುವಕ ಯುವತಿ ಮಂಡಲ ,ಸ್ವ ಸಹಾಯ ಸಂಘದ ಮಹಿಳೆಯರಿಗೆ ಮಾದಕದ್ರವ್ಯ ವ್ಯಸನ ತಡೆಗಟ್ಟುವಿಕೆ, ಜೀವನ ಕೌಶಲ್ಯ, ವೃತ್ತಿ ಮಾರ್ಗದರ್ಶನ, ಉದ್ಯೋಗ ಸಿದ್ದತೆ, ಉದ್ಯಮಶೀಲತೆ ಇನ್ನಿತರ ಕೌಶಲ್ಯಗಳ ಕುರಿತಾದ ಉಚಿತ ತರಬೇತಿ ನೀಡಿದ ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 13 ಉದ್ಯೋಗ ಮೇಳ ಅಯೋಜಿಸಿ ಯುವಜನರ ಉದ್ಯೋಗಕ್ಕೆ ನೆರವಾಗಿದ್ದಾರೆ.ದೇಶದ ವಿವಿಧ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿ ಗಳನ್ನು ಸರಕಾರಿ ಕಾಲೇಜಿನ‌ ಅಂತಿಮ ವರ್ಷದ ಸುಮಾರು 390 ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ರ ಮುಖಾಂತರ ಉದ್ಯೋಗ ಸಿದ್ದತೆ ಕುರಿತಾದ ಮಾರ್ಗದರ್ಶನ ನೀಡಿದ್ದಾರೆ. ಇವರು ಕೇಂದ್ರ ಮತ್ತು ರಾಜ್ಯ ಸರಕಾರದ ಹಲವಾರು ಯೋಜನೆ ಮತ್ತು ಕಾರ್ಯಗಳನ್ನು ಜಿಲ್ಲೆಯಲ್ಲಿ ಸಂಘಟಿಸಿದ್ದಾರೆ. ಇವರು ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಯುವ ಸಮಾವೇಶ, ತರಬೇತಿ, ಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಇವರ ಯುವ ಜನರ ಸಬಲೀಕರಣಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಅನೀಶ್ ಪ್ರಕಟಣೆ ನೀಡಿದ್ದಾರೆ.ಶ್ರೀಕಾಂತ್ ಪೂಜಾರಿ ಬಿರಾವು ರವರ ಯುವಜನ ಸೇವೆಯನ್ನು ಗುರುತಿಸಿ ಕಳೆದ ವರ್ಷ ಭಾರತ ಸರಕಾರ ದೆಹಲಿಯ ಕೆಂಪುಕೋಟೆ ಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಅತಿಥಿಯಾಗಿ ಅಹ್ವಾನಿಸಿ ಗೌರವಿಸಿದೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version