Connect with us

ಇತರ

ದ್ವೇಷ ಹಾಗೂ ಕೋಮು ಪ್ರಚೋದಕ ಬಾಷಣ ಮಾಡಿ ನಾಡಿನ ಸಾಮರಸ್ಯ ಹಾಳು ಮಾಡುವ ಮತೀಯ ಶಕ್ತಿಗಳ ವಿರುದ್ಧ ನಿರ್ದ್ಯಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹ : ಕಾಂಗ್ರೆಸ್ ಮುಖಂಡ ಎಚ್. ಮಹಮ್ಮದ್ ಅಲಿ

Published

on

ಜಿಲ್ಲೆಯಲ್ಲಿ ಹಿಂದೆ ಮತ್ತು ಈಗ ನಡೆದಿರುವ ಯುವಕರ ಹತ್ಯೆಗಳು ಹಾಗೂ ಆ ಬಳಿಕ ನಡೆದಿರುವ ಅಹಿತಕರ ಘಟನೆಗಳಿಗೆ ಬಿಜೆಪಿ ಹಾಗೂ ಸಂಘಪಾರಿವಾರದ ನಾಯಕರುಗಳು ನಿರಂತರವಾಗಿ ಮಾಡುತ್ತಿರುವ ಕೋಮುಪ್ರಚೋದನೆ ಕೃತ್ಯ ಹಾಗೂ ದ್ವೇಷ ಭಾಷಣಗಳೆ ಮುಖ್ಯ ಕಾರಣ ಆದುದರಿಂದ ದ್ವೇಷ ಭಾಷಣ ಮಾಡುವ ಮತ್ತು ಕೋಮು ಪ್ರಚೋದಕ ಹೇಳಿಕೆ ನೀಡುತ್ತಿರುವ ವ್ಯಕ್ತಿ ಎಷ್ಟೇ ದೊಡ್ಡವನಿರಲಿ ಅಂತವರ ವಿರುದ್ಧ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸೊ ಮೋಟೋ ಕೇಸ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ನಾಯಕ ಎಚ್. ಮಹಮ್ಮದ್ ಅಲಿಯವರು ಮಾನ್ಯ ಗ್ರಹ ಸಚಿವರಲ್ಲಿ ಆಗ್ರಹಿಸಿರುತ್ತಾರೆ.

ನೆನ್ನೆ ಪುತ್ತೂರಿನಲ್ಲಿ ಬಂದ್ ವಿಚಾರ ತಿಳಿಯದೆ ಅಂಗಡಿ ತೆರೆದಿದ್ದ ಮುಸ್ಲಿಂ ವ್ಯಾಪಾರಸ್ತರ ಅಂಗಡಿಗಳಿಗೆ ತೆರಳಿ ಅರುಣ್ ಕುಮಾರ್ ಪುತ್ತಿಲ ಮತ್ತು ಮುರಳಿಕೃಷ್ಣ ಹಸಂತಡ್ಕ ನೇತ್ರತ್ವದಲ್ಲಿ ನೂರಾರು ಕಾರ್ಯಕರ್ತ ರು ಪೊಲೀಸರ ಸಮ್ಮಖದಲ್ಲಿ ವ್ಯಾಪಾರ ಸ್ತರಿಗೆ ಬೆದರಿಕೆ ಒಡ್ಡಿರುವ ಘಟನೆ ನಡೆದಿರುತ್ತದೆ.ಅವರು ಈ ರೀತಿ 144 ಸೆಕ್ಷನ್ ನಿಷೇದಾಜ್ಞೆಯನ್ನು ಉಲ್ಲಂಘನೆ ಮಾಡಿ ರುತ್ತಾರೆ ಈ ಬಗ್ಗೆಯೂ ಕ್ರಮತೆಗೆದು ಕೊಳ್ಳುವಂತೆ ಅವರು ಆಗ್ರಹಿಸಿರುತ್ತಾರೆ

ದ ಕ ಜಿಲ್ಲಾ ಕಾಂಗ್ರೆಸ್ ನ ನಿಯೋಗ ಇಂದು ಮಂಗಳೂರಿನಲ್ಲಿ ಗ್ರಹಸಚಿವ ಜಿ. ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಯಾಗಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಅವರು ಈ ಆಗ್ರಹವನ್ನು ಮಾಡಿರುತ್ತಾರೆ

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version