Connect with us

ಸ್ಥಳೀಯ

ಮಾ.9ರಿಂದ 31: ಮೆಸ್ಕಾಂನಿಂದ ವಿದ್ಯುತ್ ಬಿಲ್ ಕಂದಾಯ ವಿಶೇಷ ವಸೂಲಾತಿ ಅಭಿಯಾನ

Published

on

ಪುತ್ತೂರು: 2025-26ನೇ ಸಾಲಿನ ಆರ್ಥಿಕ ವರ್ಷದ ಅಂತ್ಯದ ತಿಂಗಳಿನಲ್ಲಿ ಮಾ.9ರಿಂದ 31ರವರೆಗೆ ಮೆಸ್ಕಾಂ ವಿಶೇಷ ವಿದ್ಯುತ್ ಬಿಲ್ ಕಂದಾಯ ವಸೂಲಾತಿ ಅಭಿಯಾನವನ್ನು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದೆ.

ಈ ಅವಧಿಯಲ್ಲಿ ಎಲ್ಲಾ ಗ್ರಾಹಕರು ತಮ್ಮ ಎಲ್ಲಾ ವರ್ಗದ ಸ್ಥಾವರಗಳ ಮಾರ್ಚ್ 2026ರ ತಿಂಗಳ ಬಿಲ್‌ನ ಒಟ್ಟು ಮೊತ್ತ ಮತ್ತು ಅಧಿಕ ಭದ್ರತಾ ಠೇವಣಿಗಳ ಮೊತ್ತಗಳನ್ನು ಕಡ್ಡಾಯವಾಗಿ ಪಾವತಿಸಲು ವಿನಂತಿಸಲಾಗಿದೆ. ವಿಶೇಷ ವಿದ್ಯುತ್ ಬಿಲ್ ಕಂದಾಯ ವಸೂಲಾತಿ ಅಭಿಯಾನದ ಅವಧಿಯಲ್ಲಿ ವಿದ್ಯುತ್ ಬಿಲ್ ಬಾಕಿ ಪಾವತಿಸದ ಸ್ಥಾವರಗಳ ವಿದ್ಯುತ್ ನಿಲುಗಡೆಗೊಳಿಸಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version