Published
7 hours agoon
By
Akkare Newsಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಪ್ಪಳ ಎಂಬಲ್ಲಿ ಪುಷ್ಪಾವತಿ ಎಂಬವರ ಮನೆಗೆ ಹೋಗುವ ಸಂಪರ್ಕ ರಸ್ತೆಗೆ ಸ್ಥಳೀಯ ನಿವಾಸಿ ಪದ್ಮನಾಭ ಸಪಲ್ಯ ಎಂಬಾತ ಗೇಟ್ ಹಾಕಿ ಬೀಗ ಜಡಿದು ಕಿರುಕುಳ ನೀಡಿದ್ದಾನೆ. ಈ ಬಗ್ಗೆ ವಿಚಾರಿಸಲು ಬಂದ ಪುಷ್ಪಾವತಿಯವರ ಮುಂದೆಯೇ ಪಂಚಾಯತ್ ಉಪಾಧ್ಯಕ್ಷ ಪದ್ಮನಾಭ ಸಪಲ್ಯ ತನ್ನ ಚಡ್ಡಿ ಜಾರಿಸಿ ಗುಪ್ತಾಂಗವನ್ನು ಅಲ್ಲಾಡಿಸಿ ವಿಕೃತವಾಗಿ ವರ್ತಿಸಿದ್ದಾನೆ. ಮಾತೆತ್ತಿದರೆ ಮಹಿಳೆಯರ ಬಗ್ಗೆ ಗೌರವ, ದೇಶಪ್ರೇಮಿ, ಮಾತೆಯರ ರಕ್ಷಣೆ ಎಂದು ಬಾಯಿ ಬಡಿದುಕೊಳ್ಳುವ ಬಿಜೆಪಿ ಪಕ್ಷದ ಪದ್ಮನಾಭ ಸಪಲ್ಯನ ವಿಕೃತ ಚೇಷ್ಟೆ ಸಭ್ಯ ನಾಗರಿಕರನ್ನು ತಲೆತಗ್ಗಿಸುವಂತೆ ಮಾಡಿದೆ.
ವಿಕೃತ ಬುದ್ಧಿಯ ಪದ್ಮನಾಭ ಸಪಲ್ಯ ವಿರುದ್ಧ ಪುಷ್ಪಾವತಿ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ದೂರಿಗೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ವಿಟ್ಲ ಠಾಣೆಯಲ್ಲಿ ಬಿಎನ್ಎಸ್ 2023(U/s 79)ರಂತೆ ಪ್ರಕರಣ ದಾಖಲಾಗಿದೆ.
ಬಿಜೆಪಿ ಸದಸ್ಯನನ್ನು ಪಕ್ಷದಿಂದ ಉಚ್ಚಾಟನೆ