Published
1 year agoon
By
Akkare News
ಉಪ್ಪಿನಂಗಡಿ : ಉಪ್ಪಿನಂಗಡಿಯ ಹೃದಯ ಭಾಗದಲ್ಲಿ ಬುರ್ಜುಮಾನ್ ಶಾಪಿಂಗ್ ಉದ್ಘಾಟನೆಯನ್ನು ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೆಳೆಯುತ್ತಿರುವ ಉಪ್ಪಿನಂಗಡಿ ಪಟ್ಟಣ ಮತ್ತು ಕನಸಿನ ಉಪ್ಪಿನಂಗಡಿ ಪಟ್ಟಣದ ಬಗ್ಗೆ ಸರ್ಕಾರದ ಅನುದಾನಗಳು ಮತ್ತು ತಮ್ಮ ಅವಧಿಯಲ್ಲಿ ನೆರವೇರಿಸಿದ ಕಾರ್ಯಕ್ರಮಗಳ ಪಟ್ಟಿಯನ್ನು ನೀಡಿ ಉಪ್ಪಿನಂಗಡಿಯ ಹೊಸ ಸಂಭ್ರಮಕ್ಕೆ ಶುಭಕೋರಿದರು.
ನಂತರ ಮಾಜಿ ಶಾಸಕರಾದ ಸಂಜೀವ ಮಟಂದೂರ್, ಹನೀಫ್ ಖಾನ್ ಕೋಡಾಜೆ, ಡಾ. ರಾಜಾರಾಮ್ ರವರು ಶುಭಕೋರಿದರು.
ಸಮಾರಂಭದಲ್ಲಿ ಬುರ್ಜುಮಾನ್ ಶಾಪಿಂಗ್ ಕಾಂಪ್ಲೆಕ್ಸ್ ನ ಮಾಲಕರಾದ ಮಹಮ್ಮದ್ ಮುಸ್ತಫಾ ಮೂಡಬಿದ್ರೆ ಮತ್ತು ನಝೀಮುದ್ದೀನ್, ಡಾ. ನಝೀರ್ ಮೂಡಬಿದ್ರೆ, ಚಂದ್ರಹಾಸ ಶೆಟ್ಟಿ, ಮಹಮ್ಮದ್ ಬಡಗನ್ನೂರ್, ಮಹಮ್ಮದ್ ಹಾಜಿ ನೆಕ್ಕಿಲಾಡಿ, ಚಂದ್ರಶೇಖರ್ ಮೂಡಬಿದ್ರೆ, ರಕ್ಷಿತ್ ಶಿವರಾಂ, ಪ್ರಸನ್ನ ಕುಮಾರ್ ಸಿಝ್ಲರ್, ಮಹಮ್ಮದ್ ಎಂ ಎಸ್, ತೌಸೀಫ್ ಯು ಟಿ, ಮುರಳೀಧರ್ ರೈ, ಅಶ್ರಫ್ ಬಸ್ತಿಕ್ಕಾರ್, ವಿನ್ಸೆಂಟ್ ಫೆರ್ನಾಂಡಿಸ್, ನಝೀರ್ ಮಠ, ವಿದ್ಯಾಲಕ್ಮೀ ಪ್ರಭು, ರಶೀದ್ ಮಠ, ಜಲೀಲ್ ಮುಕ್ರಿ, ಹಾರೂನ್ ಅಗ್ನಾಡಿ, ಶುಕೂರ್ ಶುಕ್ರಿಯಾ, ಫಾರೂಕ್ ಪೆರ್ನೆ,ಹಾಫೀಲ್ ಕೂರ್ನಡ್ಕ, ಫಾರೂಕ್ ಬಯಾಬೆ, ಅಶ್ರಫ್, ಬಶೀರ್ ಪರ್ಲಡ್ಕ, ಮಹಮ್ಮದ್ ಕೆಂಪಿ ಉಪಸ್ಥಿತರಿದ್ದರು.
ಎ. ಎಸ್. ಮೈನ್ಟೇನೆನ್ಸ್ ನ ಶಬೀರ್ ಕೆಂಪಿ ಸ್ವಾಗತಿಸಿ, ಆಚಿನ ಇಬ್ರಾಹಿಂರವರು ಧನ್ಯವಾದ ಹೇಳಿದರು. ಇರ್ಷಾದ್ ಯು ಟಿ ಕಾರ್ಯಕ್ರಮ ನಿರೂಪಿಸಿದರು.