Published
6 hours agoon
By
Akkare Newsಪುತ್ತೂರು: ರಾಜೀವ್ ಗಾಂಧಿ ಯೂನಿವರ್ಸಿಟಿ ಅಧೀನದಲ್ಲಿ ನಡೆದ ಆಯುರ್ವೇದ ಎಂ.ಡಿ.ಯ ಅಂತಿಮ ಪರೀಕ್ಷೆಯಲ್ಲಿ ಪುತ್ತೂರಿನ ಡಾ. ಮೇಘಶ್ರೀ 2. 676 ಪಡೆದು ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಭಾಗದಲ್ಲಿ 2 ನೇ
ರ್‍ಯಾಂಕ್ ಪಡೆದಿರುತ್ತಾರೆ. ಅವರು ಎಸ್‌ಡಿಎಂ ಆಯುರ್ವೇದ ಮೆಡಿಕಲ್ ಕಾಲೇಜ್ ಕುತ್ಪಾಡಿ ಇಲ್ಲಿ ಎಂ.ಡಿ. ವ್ಯಾಸಂಗವನ್ನು ಮಾಡಿದ್ದು, ಪ್ರಸ್ತುತ ಪ್ರಸನ್ನ ಆಯುರ್ವೇದ ಕಾಲೇಜ್ ಬೆಳ್ತಂಗಡಿ ಇಲ್ಲಿ ವೈದ್ಯಕೀಯ ವಿಭಾಗದ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಷಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು ಬಹುಮುಖ ಪ್ರತಿಭೆ ಹೊಂದಿರುತ್ತಾರೆ..ಭರತನಾಟ್ಯ ಹಾಗೂ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ಉನ್ನತ ವಿದ್ವತ್ ಪದವಿಯನ್ನು ಸಹ ಸಂಪಾದಿಸಿದ್ದಾರೆ
ಅವರು ಸುಶೀಲಾ ಕೆ. ಹಾಗೂ ಸಾರಿಗೆ ಇಲಾಖೆಯ ನಿವೃತ್ತ ಉದ್ಯೋಗಿ ಪುರುಷೋತ್ತಮ ಬಿ. ಅವರ ಪುತ್ರಿ, ಪುತ್ತೂರಿನ ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ. ಸಿ. ಅವರ ಪತ್ನಿ