Published
6 hours agoon
By
Akkare Newsಪುತ್ತೂರು : ರಾಜ್ಯ ಸರಕಾರದ ಆದೇಶದ ಮೇರೆಗೆ ಪೂಡಿ ಮುಕ್ತ ತಾಲೂಕು ಇಂದು ವಿವಿಧ ಜಿಲ್ಲೆಯ 30ಕ್ಕೂ ಹೆಚ್ಚು ಸರ್ವೆಯರಗಳು ಪುತ್ತೂರಿಗೆ ಆಗಮಿಸಿದ್ದಾರೆ.
ಶಾಸಕರ ವಿಶೇಷ ಮುತುವರ್ಜಿಯಿಂದ ಅವರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಿ ತಾಲೂಕಿನಾದ್ಯಂತ ಉಚಿತ ಪ್ಲಾಟಿಂಗ್ ಮಾಡುವ ಕೆಲಸವು ನಾಳೆಯಿಂದ ಶುರುವಾಗಲಿದೆ ಹಲವು ವರ್ಷಗಳಿಂದ ಆಗದ ಕಡತಗಳು ಇನ್ನು ಕೆಲವೇ ಕೆಲವು ದಿನಗಳಲ್ಲಿ ಜನರ ಕೈ ಸೇರಲಿದೆ. ಶಾಸಕರ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಪ್ರಸಂಸೆ ವ್ಯಕ್ತವಾಗಿದೆ. ಹೊರ ಜಿಲ್ಲೆಗಳಿಂದ ಬಂದ ಸರ್ವೆಗಳಿಗೆ ಉಳಿದುಕೊಳ್ಳಲು ಶಾಸಕರು ಸರ್ವ ವ್ಯವಸ್ಥೆಗಳನ್ನು ಕೂಡ ಮಾಡಿದ್ದಾರೆ.