Published
4 hours agoon
By
Akkare Newsಪುತ್ತೂರು: ಬೆಳ್ಳಿಪ್ಪಾಡಿ : ಮೇ8, ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದ. ಕ,ಜಿ,ಪ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿಪ್ಪಾಡಿ ಯಲ್ಲಿ ನೀರಿನ ಅವಶ್ಯಕತೆ ಇದ್ದು ಒಂದು ಕೊಳವೆ ಬಾವಿ ಕೆಟ್ಟು ಹೋದ ಕಾರಣ, ಶಾಲಾ ಅಧ್ಯಕ್ಷರಾದ ವಾಸು ಆಚಾರ್ಯರವರು ಕೊಳವೆ ಬಾವಿ ಗೆ ಪಾಯಿಂಟ್ ನೋಡುವ ಸ್ಥಳೀಯರೇ ಆದ ಹಿರಿಯ ವಿದ್ಯಾರ್ಥಿ ಅದ ಸೋನಿತ್ ಅರ್ಬಿಯವರಲ್ಲಿ ವಿಚಾರಿಸಿದಾಗ, ಸೋನಿತ್ ರವರು ಶಾಲೆಗಾಗಿ, ಮಕ್ಕಳಿಗಾಗಿ ನಾನು ಉಚಿತವಾಗಿ ಕೊಳವೆ ಬಾವಿ ತೆಗೆಸಿಕೊಡುತ್ತೇನೆ ಎಂದು ಹೇಳಿದರು.
ಅದೇ ಪ್ರಕಾರ ಸೋನಿತ್ ರವರೇ ಬಂದು, ತಾವೇ ಪಾಯಿಂಟ್ ನೋಡಿ, ಕೊಳವೆ ಬಾವಿ ತೆಗೆಸಿದರು, ಸೋನಿತ್ ರುವವರು ಹೇಳಿದಾಗೆ ನೀರು ಸಿಕ್ಕಿರುತ್ತದೆ. ಸೋನಿತ್ ರವರ ಈ ಕೆಲಸಕ್ಕೆ ಗ್ರಾಮಸ್ಥರು, ಶಾಲಾ-ಪೋಷಕರು ಶಾಲಾ ಎಸ್‌ಡಿಎಂಸಿ,ಗ್ರಾಮ ಪಂಚಾಯತ್, ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್,ಸದಸ್ಯರಾದ ಉಷಾ ಲಕ್ಷ್ಮಣ ಪೂಜಾರಿ ಕೊರ್ಯ, ಎಸ್ ಡಿ ಎಂ ಸಿ ಅಧ್ಯಕ್ಷರಾದ ವಾಸು ಆಚಾರ್ಯ, ಸುಮಿತ್ರ ಪ್ರಭಾರ ಮುಖ್ಯ ಗುರುಗಳು, ಮಲ್ಲಿಕಾರ್ಜುನ ಅಡಗಲಿ ಸಹ ಶಿಕ್ಷಕರು, ಪದ್ಮನಾಭ ರಂಜಾಜೆ, ಲಕ್ಷ್ಮಣ ಪೂಜಾರಿ ಕೊರ್ಯ, ಲಿಂಗಪ್ಪ ಕಾಪಿಕಾಡು,ರವಿ, ದುಗ್ಗಪ್ಪಗೌಡ ದೇವಸ್ಯ ಹರೀಶಕ ಕೃಷ್ಣ ಕಾಪಿಕಾಡು, ರಮೇಶ್ ಬೆಳ್ಳಿ ಪಾಡಿ ಕ್ರಾಸ್ ಮತ್ತು ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.