Published
9 months agoon
By
Akkare News
ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಸರಕಾರಿ ಶಾಲೆಯ ಹತ್ತಿರ ರಸ್ತೆಅಭಿವೃದ್ಧಿಯಾಗುವಾಗ ಕಣಿಗಳು ಬ್ಲಾಕ್ ಆಗಿ, ನೀರು ರಸ್ತೆಯಲ್ಲಿ ಹರಿಯುವುದುದನ್ನು ಗಮನಿಸಿದ ಶಾಸಕರು, ಪಕ್ಕದ ಮನೆಯಿಂದ ಹಾರೆ ಯನ್ನು ತೆಗೆದುಕೊಂಡು ಬಂದು ಸರಿ ಮಾಡುವ ಕೆಲಸ ಮಾಡಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು ಇದಕ್ಕೆ ಸಾತ್ ನೀಡಿದರು. ನಂತರ ಗುತ್ತಿಗೆದಾರರಿಗೆ ಫೋನ್ ಮಾಡಿ ಜೆಸಿಬಿಯನ್ನು ತರಿಸಿ ಉಳಿದ ಕಣಿಯನ್ನು ಸರಿಪಡಿಸುವ ವ್ಯವಸ್ಥೆ ಮಾಡಿದರು.ಶಾಸಕರ ಈ ಕೆಲಸಕ್ಕೆ ಗ್ರಾಮಸ್ಥರು ಶ್ಲಾಘನ ವ್ಯಕ್ತಪಡಿಸಿದ್ದಾರೆ.