Connect with us

ಅಭಿವೃದ್ಧಿ ಕಾರ್ಯಗಳು

ಕೋಡಿಂಬಾಡಿ ಗ್ರಾಮ ಪಂಚಾಯತ್ ವತಿಯಿಂದ 2024-25ರ ಅವಧಿಯಲ್ಲಿ ಅನುಷ್ಠಾನಗೊಳಿಸಿದ ಗ್ರಾಮ ವ್ಯಾಪ್ತಿಯ ರಸ್ತೆಗಳಿಗೆ ನಾಮಫಲಕ ಅನಾವರಣ

Published

on

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವತಿಯಿಂದ 2024-25ರ ಅವಧಿಯಲ್ಲಿ ಅನುಷ್ಠಾನಗೊಳಿಸಿದ ಗ್ರಾಮ ವ್ಯಾಪ್ತಿಯ ರಸ್ತೆಗಳಿಗೆ ನಾಮಫಲಕ ಅಳವಡಿಸುವ ಯೋಜನೆಯನ್ನು ಪಲಾನುಭವಿಗಳು ಉದ್ಘಾಟಿಸಿದ್ದಾರೆ.
ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಡಿ ಗ್ರಾಮದ ವಿವಿಧ ರಸ್ತೆಗಳಿಗೆ ಗ್ರಾ.ಪಂ. ಆಡಳಿತ ಮಂಡಳಿ ವತಿಯಿಂದ ಈಗಾಗಲೇ ನಾಮಫಲಕಗಳನ್ನು ಅಳವಡಿಸಲಾಗಿದೆ. ಇದೀಗ ನೆಕ್ಕರಾಜೆ-ಪರಬಪಾಲು ರಸ್ತೆಗೆ ಅಳವಡಿಸಲಾದ ನಾಮಫಲಕದ ಉದ್ಘಾಟನೆ ನೆರವೇರಿಸಲಾಯಿತು. ಸ್ಥಳೀಯ ಫಲಾನುಭವಿಗಳ ನೇತೃತ್ವದಲ್ಲಿ‌ ನಡೆದ ಕಾರ್ಯಕ್ರಮದಲ್ಲಿ‌ ವಿಕ್ರಂ ಶೆಟ್ಟಿ ಅಂತರ ನಾಮಫಲಕ ಅನಾವರಣಗೊಳಿಸಿದರು.

ಬಳಿಕ ಮಾತನಡಿದ ವಿಕ್ರಂ ಶೆಟ್ಟಿ ಅವರು ಇದು ಗ್ರಾಮಕ್ಕೆ ಬಹಳ ಅಗತ್ಯವಾದ ಯೋಜನೆಯಾಗಿದೆ. ಪಂಚಾಯತ್ ಮುಂದೆ ಕೂಡ ಇಂಥ ಯೋಜನೆಗಳನ್ನು ಅನುಷ್ಠಾನ ಮಾಡಿದರೆ ಗ್ರಾಮಸ್ಥರಿಗೆ ತುಂಬ ಪ್ರಯೋಜನವಾಗಬಹುದು ಎಂದು ತಿಳಿಸಿದರು.ಫಲಾನುಭವಿಗಳಾದ ಗ್ರಾ.ಪಂ. ಮಾಜಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಮಾತನಾಡಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಒಳ್ಳೆಯ ರೀತಿಯ,ಜನ ಮೆಚ್ಚುವಂತಹ ಕೆಲಸ ಮಾಡಿದ್ದಾರೆ, ನನ್ನ ಅವಧಿಯಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ವಾಗಿದೆ, ಇದೀಗ ಗ್ರಾಮ ಪಂಚಾಯತ್ ನೂತನ ಕಟ್ಟಡ ಅಭಿನಂದನಿಯ, ಈ ನಮಫಲಕ ದಿಂದ ಹೊರಗಿನಿಂದ ನಮ್ಮೂರಿಗೆ ಬರುವ ಅತಿಥಿ ಗಳಿಗೆ ಬಹಳ ಉಪಯುಕ್ತ ವಾಗಲಿದೆ ಎಂದು ತಿಳಿಸುದರು.

ಗ್ರಾ.ಪಂ.‌ಮಾಜಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಮಾತನಾಡಿ ಗ್ರಾ.ಪಂ. ಆಡಳಿತ ಮಂಡಳಿಯ ಅವಧಿ ಮುಗಿದ ಕಾರಣ ಇದನ್ನು ಉದ್ಘಾಟನೆ ಮಾಡಲು ಆಗಿರಲಿಲ್ಲ.‌ಸ್ಥಳೀಯ ಪಲಾನುಭವಿಗಳು ಸೇರಿ ಉದ್ಘಾಟನೆ ಮಾಡಿರುವುದು ಸಂತೋಷ ತಂದಿದೆ. ಯಾಕೆಂದರೆ ಈ ಬೋರ್ಡ್ ಗೆ ಗ್ರಾಮಸ್ಥರ ಬೆಂಬಲದಿಂದ, ಮಹತ್ವ ಇದೆ ಎಂದು ಸ್ಪಷ್ಟ ವಾಯಿತು . ಈಗಿನ ಡಿಜಿಟಲ್ ಯುಗದಲ್ಲಿ ಅಮೆಜಾನ್, ಝೋಮ್ಯಾಟೋ, ಮೊದಲದ ಆನ್ಲೈನ್ ಮಾರಾಟಗಳು ಮನೆಯ ಬಾಗಿಲಿಗೆ ಬರುವ ಸಂದರ್ಭದಲ್ಲಿ ಇದು ಬಹಳ ಮಹತ್ವ ಪಡೆಯಲಿದೆ ಮತ್ತು ಗೂಗಲ್ ಲೊಕೇಶನ್ ಗೂ ಬಹಳ ಉಪಯುಕ್ತ ವಾಗಲಿದೆ ಎಂದು ತಿಳಿಸಿದರು.

 

ಮುಂದಿನ ದಿನಗಳಲ್ಲಿ ಗ್ರಾಮದ ಎಲ್ಲಾ ರಸ್ತೆಯಲ್ಲಿ ಕೂಡ ಇಂತಹ ಬೋರ್ಡ್ ಹಾಕುವ ನಿರ್ಣಯಗಳನ್ನು ಈಗಾಗಲೇ ಮಾಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸ್ಥಳೀಯರಾದ ಯತೀಶ್ ಶೆಟ್ಟಿ ಮೊದಲದವರು ಉಪಸ್ಥಿತರಿದ್ದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version