Connect with us

ಅಭಿವೃದ್ಧಿ ಕಾರ್ಯಗಳು

ಮಂಗಳೂರು – ಪುತ್ತೂರು ಪ್ರಯಾಣಿಕರಿಗೆ ಸ್ವೀಟ್ ನ್ಯೂಸ್…. ಇಂದು ಶಾಸಕ ಅಶೋಕ್ ಕುಮಾರ್ ರೈ ಯವರಿಂದ ಮಂಗಳೂರು-ಪುತ್ತೂರು ಎಕ್ಸ್ ಪ್ರೆಸ್ ಬಸ್ ಗೆ ಚಾಲನೆ

Published

on

ಇಂದಿನಿಂದ ಪುತ್ತೂರು- ಮಂಗಳೂರು ನಾನ್ ಸ್ಟಾಪ್ ಎಕ್ಸ್ ಪ್ರೆಸ್ ಬಸ್ ಆರಂಭ: ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರ ಕನಸಿನ ಕೂಸು ಪುತ್ತೂರು- ಮಂಗಳೂರು ನಾನ್ ಸ್ಟಾಪ್ ಎಕ್ಸ್ ಪ್ರೆಸ್ ಸಂಚಾರ ನಾಳೆ ( ಜು.14) ರಂದು ಪ್ರಾರಂಭಗೊಳ್ಳಲಿದೆ.


ಪುತ್ತೂರು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಹೊರಡುವ ಬಸ್ಸು ಎಲ್ಲೂ ನಿಲುಗಡೆಯಿಲ್ಲದೆ ನೇರವಾಗಿ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣಕ್ಕೆ ತಲುಪಲಿದೆ. ಪ್ರತೀ ಒಂದು ಗಂಟೆಗೊಂದು ಬಸ್ ಹೊರಡಲಿದೆ. ಮಹಿಳೆಯರಿಗೆ ಈ ಬಸ್ ನಲ್ಲಿ ಶಕ್ತಿ ಯೋಜನೆಯನುಸಾರ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ನಾಳೆ ಬೆಳಿಗ್ಗೆ 11.00 ಗಂಟೆಗೆ ನೂತನ ಬಸ್ ವ್ಯವಸ್ಥೆಗೆ ಶಾಸಕರು ಚಾಲನೆ ನೀಡಲಿದ್ದಾರೆ.

ಸುಮಾರು ಒಂದು ಗಂಟೆ ಅವಧಿಯಲ್ಲಿ ಬಸ್ ಪುತ್ತೂರಿನಿಂದ ಮಂಗಳೂರು ತಲುಪಲಿದೆ. ಸ್ವಂತ ವಾಹನ ಇದ್ದವರೂ ಈ ಬಸ್ಸಲ್ಲಿ ತೆರಳಬಹುದಾಗಿದೆ ಯಾಕೆಂದರೆ ಅತಿ ವೇಗದಲ್ಲಿ ಈ ಬಸ್ಸು‌ಸಂಚರಿಸಲಿರುವ ಕಾರಣ ಸ್ವಂತ ವಾಹನದಷ್ಟೇ ಸಮಯದಲ್ಲಿ ಮಂಗಳೂರು ತಲುಪುತ್ತದೆ. ಹೊಸ ವ್ಯವಸ್ಥೆಯಲ್ಲಿ ಎಲ್ಲರೂ ಪ್ರಯಾಣಿಸುವ ಮೂಲಕ ಸಹಕಾರ ನೀಡಿ ಸರಕಾರಿ ವ್ಯವಸ್ಥೆಗೆ ಬೆಂಬಲ ನೀಡಬೇಕು

ಅಶೋಕ್ ರೈ ಶಾಸಕರು ,ಪುತ್ತೂರು



 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version