Connect with us

ಅಭಿವೃದ್ಧಿ ಕಾರ್ಯಗಳು

ಪುತ್ತೂರಿನಲ್ಲಿ ಭೂಗತ ಒಳಚರಂಡಿ ಯೋಜನೆ ಡಿಪಿಆರ್ ಸಿದ್ದವಾಗಿದ್ದು ಅನುಮೋದನೆಗೆ ಶಾಸಕ ಅಶೋಕ್ ರೈ ಮನವಿ

Published

on

​ಪುತ್ತೂರು:ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪಟ್ಟಣಕ್ಕೆ ಕೇಂದ್ರ ಸರ್ಕಾರದ Urban Challenge Fundಯೋಜನೆಯಡಿಯಲ್ಲಿ ಭೂಗತ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಸಲುವಾಗಿ ₹41.79 ಕೋಟಿ ವೆಚ್ಚದ ಯೋಜನಾ ವರದಿ (DPR) ಸಿದ್ಧಪಡಿಸಲಾಗಿದೆ.ಇದನ್ನು ಅನುಮೋದನೆ‌ ಮಾಡುವಂತೆ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಶಾಸಕ ಅಶೋಕ್ ರೈ ಮನವಿ ಸಲ್ಲಿಸಿದರು.

 

​ನೂತನ ನಗರಾಭಿವೃದ್ದಿ ಸಚಿವರನ್ನು ಭೇಟಿಯಾಗಿ ಶಾಸಕರು ಅಭಿನಂದನೆ ಸಲ್ಲಿಸಿದರು. ಪುತ್ತೂರು ನಗರದಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದೆ ಇರುವುದು ಭವಿಷ್ಯದಲ್ಲಿ ಪುತ್ತೂರಿಗೆ ದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಭೂಗತ ಒಳಚರಂಡಿ ವ್ಯವಸ್ಥೆ ಮಾಡಿದಲ್ಲಿ ಸುಮಾರು 1003 ಮನೆಗಳಿಗೆ ಒಳಚರಂಡಿ ಸಂಪರ್ಕ. 303 ಮ್ಯಾನ್‌ಹೋಲ್‌ಗಳ ನಿರ್ಮಾಣ ಹಾಗೂ 4.81 MLD ಸಾಮರ್ಥ್ಯದ ಒಳಚರಂಡಿ ಶುದ್ದೀಕರಣ ವ್ಯವಸ್ಥೆ ನಿರ್ಮಾಣವಾಗಲಿದೆ. ಇದರಿಂದ ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಕುಡಿಯುವ ನೀರಿನ ಮೂಲಗಳ ರಕ್ಷಣೆ ಸಾಧ್ಯವಾಗುತ್ತದೆ.

​ಸಾರ್ವಜನಿಕ ಹಿತದೃಷ್ಟಿಯಿಂದ ಪುತ್ತೂರು ನಗರಕ್ಕೆ ಕೇಂದ್ರ ಸರ್ಕಾರದ Urban Challenge Fund ಯೋಜನೆಯಡಿಯಲ್ಲಿ ವ್ಯಾಕ್ಯೂಮ್ ಡೈನೇಜ್ ತಂತ್ರಜ್ಞಾನ ಆಧಾರಿತ ಭೂಗತ ಒಳಚರಂಡಿ (UGD) ಯೋಜನ ಅನುಮೋದನೆ ನೀಡಿ ಶೀಘ್ರವಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಶಾಸಕರು‌ಮನವಿ ಮಾಡಿದರು

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version