Connect with us

ಅಭಿವೃದ್ಧಿ ಕಾರ್ಯಗಳು

ಪುತ್ತೂರು: ಬೆಳಕಿನ ಬೆಟ್ಟವಾಗಲಿದೆ ಬಿರುಮಲೆ ಬೆಟ್ಟ

Published

on

ಪುತ್ತೂರು :: ನಗರದ ಕೇಂದ್ರ ಭಾಗಕ್ಕೆ ಅಂಟಿಕೊಂಡಿರುವ ಬಿರುಮಲೆ ಬೆಟ್ಟವನ್ನುಇನ್ನಷ್ಟು ಆಕರ್ಷಕ, ಪ್ರವಾಸಿಗರನ್ನು ಸೆಳೆಯಲು ಯೋಜನೆ ಸಿದ್ಧವಾಗಿದೆ. ಇಲ್ಲಿಯ ತನಕ ರಾತ್ರಿ ಬೆಳಗದ ಬಿರುಮಲೆ ಬೆಟ್ಟಕ್ಕೆ ಡಿಜಿಟಲ್‌ ಲೈಟ್‌ ಟ್ರೀ ಬೆಳಕು ಸೂಸಲು ಅಣಿಯಾಗಿದೆ.
ಶಾಸಕ ಅಶೋಕ್‌ ಕುಮಾರ್‌ ರೈ ಅವರು ಸರಕಾರದಿಂದ 2 ಕೋಟಿ ರೂ.
ಅನುದಾನ ಮಂಜೂರು ಮಾಡಿದ್ದು ಆ ಅನುದಾನದಡಿ ಹಲವು ಕಾಮಗಾರಿ ಪ್ರಗತಿಯಲ್ಲಿದೆ. ಅವುಗಳಲ್ಲಿ ಬಿರುಮಲೆ ಬೆಟ್ಟವನ್ನು ರಾತ್ರಿ ವೇಳೆ ಬಣ್ಣ ಬಣ್ಣದ ಬೆಳಕಿನ ಮೂಲಕ ಬೆಳಗಿಸುವ ಯೋಜನೆಯೂ ಸೇರಿದೆ. ಇದಕ್ಕೆ ಸಂಬಂಧಿಸಿದ ಕಾಮಗಾರಿ ಪ್ರಗತಿಯಲ್ಲಿದೆ.


ಆಕರ್ಷಕ ಬೆಳಕಿನ ಟವರ್‌
ಬಿರುಮಲೆ ಬೆಟ್ಟದ ಮೇಲೆ ಎತ್ತರದ ಟವರ್‌ರೀತಿಯ ಆಕೃತಿಯನ್ನು ನಿರ್ಮಿಸಿ ಈ ಆಕೃತಿಯ ತುಂಬ ಬಣ್ಣ ಬಣ್ಣದ ಲೈಟ್‌ ಗಳನ್ನು ಅಳವಡಿಸಿ, ಇಡೀ ಬೆಟ್ಟದ ಮೇಲೆ ಬಣ್ಣದ ಬೆಳಕು ಸೃಷ್ಟಿಸುವ ಪ್ರಯತ್ನ ಇದು. ಬಿರುಮಲೆ ಬೆಟ್ಟದಿಂದ ಕೆಳಗೆ ವೀಕ್ಷಿಸುವ ಸಂದರ್ಭದಲ್ಲಿ ಇಡೀ ಪುತ್ತೂರು ಪೇಟೆಯೇ ಇಲ್ಲಿಗೆ ಸ್ಪಷ್ಟವಾಗಿ ಕಾಣುತ್ತದೆ. ಅದೇ ರೀತಿಯಲ್ಲಿ ಬೆಟ್ಟದ ಮೇಲೆ ಬೆಳಗುವ ಡಿಜಿಟಲ್‌ ಲೈಟ್‌ ಟ್ರೀ ಇಡೀ ಪುತ್ತೂರು ನಗರ ಭಾಗಕ್ಕೂ ಕಾಣಿಸಬೇಕು. ಆ ಮೂಲಕ ನಗರದಿಂದಲೂ ಬೆಟ್ಟವನ್ನುವೀಕ್ಷಿಸಬೇಕು ಎನ್ನುವ ಉದ್ಧೇಶದಿಂದ ಈ ಲೈಟ್‌ ಮರವನ್ನು ನಿರ್ಮಿಸಲಾಗಿದೆ. ಒಟ್ಟು 4 ಡಿಜಿಟಲ್‌ ಲೈಟ್‌ ಟ್ರೀಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಆಕೃತಿಯ ಕಾಮಗಾರಿ ಮುಗಿದಿದ್ದು, ಲೈಟ್‌ ಗಳನ್ನು ಅಳವಡಿಸುವ ಮತ್ತು ಬಣ್ಣ ಬಳಿಯಿವ ಕೆಲಸ ಭರದಿಂದ ಸಾಗುತ್ತಿದೆ.

ವಿದೇಶಿ ಮಾದರಿ ಪ್ರಯೋಗ
ಶಾಸಕ ಅಶೋಕ್‌ ಕುಮಾರ್‌ರೈ ವಿದೇಶ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಡಿಜಿಟಲ್‌ ಟ್ರೀ ಗಳನ್ನು ಗಮನಿಸಿದ್ದರು. ಅದೇ ಮಾದರಿಯಲ್ಲಿ ಪುತ್ತೂರಿನ ಬಿರುಮಲೆ ಬೆಟ್ಟದಲ್ಲೂ ಲೈಟ್‌ ಟ್ರೀ ನಿರ್ಮಿಸಬೇಕು ಎನ್ನುವ ಯೋಜನೆ ರೂಪಿಸಿದ್ದರು. ಬೆಟ್ಟದ ತುಂಬಾ ವಿವಿಧ ಲೈಟ್‌ ಗಳನ್ನು ಅಳವಡಿಸುವ ಮೂಲಕ ಬಿರುಮಲೆ ಬೆಟ್ಟವನ್ನು ಪ್ರಕಾಶಮಾನ ಸ್ಪಾಟ್‌ ಆಗಿ ಬದಲಾಯಿಸುವ ಚಿಂತನೆ ಶಾಸಕರದ್ದಾಗಿತ್ತು.
ಬಿರುಮಲೆ ಬೆಟ್ಟಕ್ಕೆ ಹೆಚ್ಚಲಿದೆ ಆಕರ್ಷಣೆ
ಮಾಣಿ-ಮೈಸೂರು ರಸ್ತೆಯ ದರ್ಬೆ ವೃತ್ತದ ಪಕ್ಕದ ಸಂಪರ್ಕ ರಸ್ತೆಯಲ್ಲಿ ಬಿರುಮಲೆ ಬೆಟ್ಟಕ್ಕೆ ತೆರಳಲು ದಾರಿ ಇದೆ. ಬಿರುಮಲೆ ಬೆಟ್ಟದ ಅಭಿವೃದ್ಧಿಯ ದೃಷ್ಟಿಯಿಂದ ಬಿರುಮಲೆ ಅಭಿವೃದ್ಧಿ ಸಮಿತಿಯೂ ಅಸ್ತಿತ್ವದಲ್ಲಿದ್ದು, ಅದರ ನೇತೃತ್ವದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಬಿರುಮಲೆ ಬೆಟ್ಟದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಸಿದ್ಧಗೊಳ್ಳುತ್ತಿರುವ ಡಿಜಿಟಲ್‌ ಲೈಟ್‌ ಟ್ರೀ ಇಲ್ಲಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ. ಬಿರುಮಲೆ ಬೆಟ್ಟಕ್ಕೆ ಬರುವ ದಾರಿಯುದ್ದಕ್ಕೂ ಬೀದಿ ದೀಪಗಳ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಅಶೋಕ್‌ ಕುಮಾರ್‌ ರೈ, ಪುತ್ತೂರು ಶಾಸಕರು


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version