Connect with us

ಅಭಿವೃದ್ಧಿ ಕಾರ್ಯಗಳು

10 ಕಂಬಳಕ್ಕೆ ಸರಕಾರದಿಂದ ತಲಾ 5 ಲಕ್ಷ ಬಿಡುಗಡೆ: ಶಾಸಕ ಅಶೋಕ್ ರೈ

Published

on

ಪುತ್ತೂರು: ತುಳುನಾಡಿನ ಐತಿಹಾಸಿಕ ಜನಪದ ಕಲೆಯಾಗಿರುವ ಕಂಬಳವನ್ನು ಉಳಿಸುವನಿಟ್ಟಿನಲ್ಲಿ ಒಂದೆಡೆ ನಿರಂತರ ಹೋರಾಟಗಳು ನಡೆದುಕೊಂಡು ಬರುತ್ತಿದೆ. ಕಂಬಳ ಇನ್ನೇನು ನಿಂತೇ ಬಿಡುತ್ತದೆ ಎನ್ನುವ ಹಂತಕ್ಕೆ ಬಂದಾಗ ಅದನ್ನು ಸುಪ್ರಿಂ ಕೋರ್ಟುತನಕ ಕೊಂಡು ಹೋಗಿ ಉಳಿಸಿದ ಕೀರ್ತಿ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಸಲ್ಲುತ್ತದೆ. ಕಂಬಳವನ್ನು ರಾಜಧಾನಿ ಬೆಂಗಳೂರಿನಲ್ಲಿ ಆಯೋಜನೆ ಮಾಡುವ ಜಗತ್ತಿಗೆ ತುಳುನಾಡಿನ ಕ್ರೀಡೆಯನ್ನು ಪರಿಚಯಿಸಿದ ಹೆಗ್ಗಳಿಗೆ ಆಶೋಕ್ ರೈ ಅವರದ್ದು. ಕಂಬಳ ನಡೆಸುವುದು ಸುಲಭವಲ್ಲ ಅದು ಕಷ್ಟಸಾದ್ಯವಾದ ಕೆಲಸ ಎಂದು ಆಳುವವರ ಗಮನಕ್ಕೆ ತಂದು ಕಂಬಳ ಅದೊಂದು ಕ್ರೀಡೆ ಅದಕ್ಕೂ ಸರಕಾರದ ನೆರವು ದೊರೆಯಬೇಕು ಎಂದು ನಾಡಿನ ದೊರೆಯಲ್ಲಿ ಮನವಿ ಮಾಡಿದ್ದೂ ಅಶೋಕ್ ರೈ. ಇದೀಗ ಕಂಬಳಕ್ಕೆ ಸರಕಾರ ಪ್ರೋತ್ಸಾಹ ನೀಡಬೇಕು ಎಂಬ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದು ಕರಾವಳಿ ಜಿಲ್ಲೆಯಲ್ಲಿ ನಡೆಯುವ ಹತ್ತು ಕಂಬಳಕ್ಕೆ ತಲಾ ೫ ಲಕ್ಷದಂತೆ ಅನುದಾನವನ್ನು ಸರಕಾರ ಬಿಡುಗಡೆ ಮಾಡಿದೆ ಇದಕ್ಕೆ ಕಾರಣ ಕರ್ತರು ಶಾಸಕ ಅಶೋಕ್ ರೈ ಅವರೇ ಆಗಿದ್ದಾರೆ.

ಯಾವ ಕಂಬಕ್ಕೆ ಅನುದಾನ?

ಕರ್ನಾಟಕ ಪ್ರವಾಸೋಧ್ಯಮ ಇಲಾಖೆಯ ಮೂಲಕ ೨೦೨೪/೨೫ ನೇ ಸಾಲಿನ ಕಂಬಳದ ಅನುದಾನ ಸರಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪುತ್ತೂರು ಕಂಬಳ, ಉಪ್ಪಿನಂಗಡಿ ಜಪ್ಪು, ಬಂಟ್ವಾಳ, ವೇಣೂರು,ಮೂಲ್ಕಿ, ಮಂಗಳೂರು, ನರಿಂಗಾಣ, ಮೂಡಬಿದ್ರಿ ಹಾಗೂ ಐಕಳ ಕಂಬಳ ಇದ್ದು ಈ ಕಂಬಳಕ್ಕೆ ತಲಾ ೫ ಲಕ್ಷ ಅನುದಾನ ದೊರೆಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಕಂಬಳವನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಸರಕಾರದ ನೆರವು ಅಗತ್ಯವಾಗಿದೆ. ತುಳುನಾಡಿನಲ್ಲಿ ನಡೆಯುವ ಜನಪದಕ್ರೀಡೆ ಕಂಬಳಕ್ಕೆ ಅನುದಾನ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದೆ. ಕಳೆದ ಬಾರಿ ಬೆಂಗಳೂರಿನಲ್ಲಿ ಆಯೋಜನೆ ಮಾಡಿದ್ದ ಬೆಂಗಳೂರು ಕಂಬಳದ ಮೂಲಕ ಕಂಬಳವನ್ನು ಜಗತ್ತಿಗೆ ಪರಿಚಯಿಸುವ ಕೆಲಸವಾಗಿದೆ. ಇದೀಗ ಕಂಬಳಕ್ಕೆ ಸರಕಾರ ತಲಾ ೫ ಲಕ್ಷ ಅನುದಾನ ನೀಡುವ ಮೂಲಕ ಕಂಬಳಕ್ಕೆ ಪ್ರೋತ್ಸಾಹ ಸಿಕ್ಕಿದಂತಾಗಿದೆ. ಯಾವ ಸರಕಾರವು ಇಷ್ಟರವರೆಗೆ ಕಂಬಳಕ್ಕೆ ಅನುದಾನವನ್ನು ನೀಡಿಲ್ಲ. ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ತುಳುನಾಡಿನ ಜನಪದ ಕ್ರೀಡೆಗೆ ಬೆಂಬಲ ನೀಡಿರುವುದು ಅಭಿನಂದನಾರ್ಹವಾಗಿದೆ.

 

ಅಶೋಕ್ ರೈ, ಶಾಸಕರು ಪುತ್ತೂರು

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version