Connect with us

ಅಭಿವೃದ್ಧಿ ಕಾರ್ಯಗಳು

ಎರಡು ಮೂರು ದಿನದೊಳಗೆ ಎಲ್ಲಾ ಲೋಕೋಪಯೋಗಿ ಇಲಾಖೆಯ ರಸ್ತೆ ಹೊಂಡಗಳನ್ನು ದುರಸ್ಥಿಗೊಳಿಸಲು ಶಾಸಕರ ಸೂಚನೆ

Published

on

ರಸ್ತೆ ಹೊಂಡ ಗುಂಡಿ ಮುಚ್ಚಲು ಬರಲಿದೆ ಹೊಸದಾಗಿ ಸಂಶೋಧನೆಗೊಂಡ ‘ಇಕೋಫಿಕ್ಸ್ ಕೆಮಿಕಲ್
ಪುತ್ತೂರು: ಮಳೆಗಾಲದಲ್ಲಿ ರಸ್ತೆಗಳಲ್ಲಿ ಹೊಂಡ ಗುಂಡಿಗಳು ಬಿದ್ದಿವೆ. ಅದನ್ನು ಖಾಯಂ ಆಗಿ ಮುಚ್ಚುವ ನಿಟ್ಟಿನಲ್ಲಿ ಹೊಸದಾಗಿ ಸಂಶೋಧನೆಗೊಂಡ ಇಕೋಫಿಕ್ಸ್ ಎಂಬ ಕೆಮಿಕಲ್ ಬಂದಿದ್ದು ಅದನ್ನು ಉಪಯೋಗಿಸಿಕೊಂಡು ಎರಡು ಮೂರು ದಿನದೊಳಗೆ ಎಲ್ಲಾ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಹೊಂಡಗಳನ್ನು ದುರಸ್ಥಿಗೊಳಿಸಲು ಸೂಚನೆ ನೀಡಿದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.


ಅವರು ಮಾಧ್ಯಮದೊಂದಿಗೆ ಮಾತನಾಡಿ, ಮಳೆಗಾಲದಲ್ಲಿ ರಸ್ತೆಯಲ್ಲಿ ನಿರ್ಮಣಗೊಂಡ ಹೊಂಡ ಗುಂಡಿಗಳನ್ನು ಮುಚ್ಚಲು ಸಿಮೆಂಟ್ ಮತ್ತಿತರ ವ್ಯವಸ್ಥೆಗಳಿಂದ ಆಗುವುದಿಲ್ಲ. ಈ ನಿಟ್ಟಿನಲ್ಲಿ ಜೈಪುರದಲ್ಲಿ ಸಂಶೋಧನೆಗೊಂಡ ಇಕೋಫಿಕ್ಸ್ ಎಂಬ ಹೊಸ ಕೆಮಿಕಲ್‌ನಿಂದ ರಸ್ತೆಯ ಗುಂಡಿಗಳನ್ನು ಖಾಯಂ ಮುಚ್ಚುವ ವ್ಯವಸ್ಥೆಗೆ ಪ್ಯಾಕ್ಟರಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಈ ಕೆಮಿಕಲ್ ಗೆ ಲೋಕೋಪಯೋಗಿ ಇಲಾಖೆ ಅನುಮೋದನೆ ನೀಡಿದೆ. ಈಗಾಗಲೇ 50 ಬ್ಯಾಗ್ ಸ್ಯಾಂಪಲ್ ಅನ್ನು ನಾವು ತರಿಸಿದ್ದೇವೆ.

ಇನ್ನು ಸರಕಾರದಿಂದ ಒಂದು ಲೋಡ್ ಕಳುಹಿಸುವ ಕೆಲಸ ಆಗಲಿದೆ. ಎರಡುಮೂರು ದಿವಸದೊಳಗೆ ಎಲ್ಲಾ ಲೋಕೋಪಯೋಗಿ ರಸ್ತೆಯಲ್ಲಿರುವ ಹೊಂಡ ಗುಂಡಿಗಳನ್ನು ಮುಚ್ಚಲು ನಿರ್ದೇಶನ ನೀಡಿದ್ದೇನೆ ಎಂದರು.

 

 

 



 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version