Published
3 months agoon
By
Akkare News
ಪುತ್ತೂರು :ಶಾಸಕ ಅಶೋಕ ಕುಮಾರ್ ರೈಯವರ ಸಹಕಾರ ಮತ್ತು ವಾರ್ಡ್ ಸದಸ್ಯರಾದ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಅವರ ವಿಶೇಷ ಮುತುವರ್ಜಿಯಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾರಂದಕುಕ್ಕು ಅಂಗನವಾಡಿ ಕೇಂದ್ರದ ಹತ್ತಿರ ಮಕ್ಕಳ ಪಾರ್ಕ್ ರಚನೆಗೆ 13 ಸೆಂಟ್ಸ್ ಜಾಗ ನಿಗದಿಯಾಗಿದೆ ಮತ್ತು ಇದರ ಅಭಿವೃದ್ಧಿ ಕಾರ್ಯಕ್ಕೆ ಗ್ರಾಮ ಪಂಚಾಯತ್ ವತಿಯಿಂದ 1.5.ಲಕ್ಷ ರೂ ಅನುದಾನ ಒದಗಿಸಲಾಗಿದೆ.
ಜಯಪ್ರಕಾಶ್ ಕೆ.ಬದಿನಾರು ರವರ ಕನಸಿನ ಕಾರ್ಯಕ್ರಮ ಗಳಲ್ಲಿ ಇದು ಕೂಡ ಒಂದಾಗಿದೆ.ಸಹಾಯಕ ಕಮಿಷನರ್ ಮತ್ತು ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ಚಂದ್ರ ನಾಯಕ್, ಗ್ರಾಮ ಆಡಳಿತಾಧಿಕಾರಿ ಶರಣ್ಯ ಹಾಗೂ ಸರ್ವೇಯರ್ ಮೋಹನ್ ಈ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ.