ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ವಾಣಿಜ್ಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸಿನಿಮಾ ಸ್ಥಳೀಯ
ಮಾ.1 ; ಕರಾವಳಿಗರ ಮನೆ-ಮನದ ದುಬೈ ಕಥೆ; ಪ್ರವಾಸಿ ಜೀವನಕ್ಕೆ ಜೀವ ತುಂಬಿದ ಪುರುಷ..! ''ಪುರುಷೋತ್ತಮನ ಪ್ರಸಂಗ'" ಅಮೋಘ ಆರಂಭಅಭಿನಂದನೆ ಅಭಿಪ್ರಾಯ ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ವಿಶೇಷ ವರದಿ ಸಭೆ - ಸಮಾರಂಭ ಸಾಮಾನ್ಯ ಸಿನಿಮಾ ಸ್ಥಳೀಯ
ಪುತ್ತೂರಿನ ಯುವ ನಿರ್ದೇಶಕ ಕಿಶನ್ ಬಲ್ನಾಡ್ ನಿರ್ದೇಶನದಲ್ಲಿ ಹೊಸ ಚಲನಚಿತ್ರದ ಮುಹೂರ್ತ.Published
2 months agoon
By
Akkare Newsಮಂಗಳೂರು: ಅಪಘಾತ ಮತ್ತು ಅತ್ಯಾಚಾರದಂತಹ ಘಟನೆಗಳು ನಡೆದಾಗ ಮೊಬೈಲ್ ನೆಟ್ವರ್ಕ್ ಇಲ್ಲದಿದ್ದರೂ ಮೊಬೈಲ್ ಫೋನ್‌ನಲ್ಲಿರುವ ಫೀಚರ್ ಬಳಸಿ ನಾವು ನಮ್ಮ ಆತ್ಮೀಯರನ್ನು ಅಥವಾ ಪೊಲೀಸರನ್ನು ಹೇಗೆ ಸಂಪರ್ಕ ಮಾಡಬಹುದು ಎಂದು ಮಹತ್ವದ ಸಂದೇಶ ಸಾರುವ ಕಿರುಚಿತ್ರ ‘ಸೇವ್ ಅವರ್ ಸೋಲ್’ ಎಂಬ ಹೆಸರಿನಲ್ಲಿ ನಿರ್ಮಾಣಗೊಂಡಿದೆ. ಎ.ಯು. ಕ್ರಿಯೇಶನ್ಸ್ ಮತ್ತು ದ.ಕ. ಜಿಲ್ಲಾ ಪೊಲೀಸ್ ಘಟಕದ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಈ ಕಿರುಚಿತ್ರದ ಬಿಡುಗಡೆ ಎ.ಯು. ಕ್ರಿಯೇಶನ್ಸ್ ಯೂ ಯೂ ಟ್ಯೂಬ್‌ನಲ್ಲಿ ಅಕ್ಟೋಬರ್ ೧೮ರಂದು ಸಂಜೆ ನಡೆಯಲಿದೆ ಎಂದು ಚಿತ್ರದ ನಿರ್ಮಾಪಕ ಯು.ಜಿ.ರಾದ ಶಾಂತಿನಗರ ತಿಳಿಸಿದ್ದಾರೆ.
ಮಂಗಳೂರು ಪತ್ರಿಕಾಭವನದಲ್ಲಿ ಅ.14ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು
‘ಸೇವ್ ಅವರ್ ಸೋಲ್’ ಕಿರುಚಿತ್ರದಲ್ಲಿ ಅತ್ಯಾಚಾರ ಹಾಗೂ ಅಪಘಾತಗಳು ನಡೆದ ಸಮಯದಲ್ಲಿ ಮೊಬೈಲ್ ಫೋನ್ ನೆಟ್ವರ್ಕ್ ಇಲ್ಲದಿದ್ದರೂ ಮೊಬೈಲ್‌ನಲ್ಲಿರುವ ಫೀಚರ್ ಬಳಸಿ ನಾವು ನಮ್ಮ ಆತ್ಮೀಯರನ್ನು ಅಥವಾ ಪೊಲೀಸರನ್ನು ಹೇಗೆ ಕಾಂಟ್ಯಾಕ್ಟ್ ಮಾಡಬಹುದು ಎಂಬ ಸಂದೇಶ ಸಾರಲಾಗಿದೆ. ಎ.ಯು. ಕ್ರಿಯೇಶನ್ಸ್ ಮೂಲಕ ನಿರ್ಮಾಣಗೊಂಡಿರುವ ಈ ಕಿರ್ರುಚಿತ್ರಕ್ಕೆ ದ.ಕ. ಜಿಲ್ಲಾ ಪೊಲೀಸ್ ಘಟಕ ಸಹಯೋಗ ನೀಡಿದೆ. ಇದೇ ಅಕ್ಟೋಬರ್ ೧೮ರಂದು ಎ.ಯು. ಕ್ರಿಯೇಶನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಕಿರುಚಿತ್ರ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.
ಎ.ಯು. ಕ್ರಿಯೇಶನ್ಸ್ ಮುಖ್ಯಸ್ಥ ಅಚಲ್ ಉಬರಡ್ಕ ಅವರು ‘ಸೇವ್ ಅವರ್ ಸೋಲ್’ ಕಿರುಚಿತ್ರದ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮತ್ತು ಎಡಿಟಿಂಗ್ ಮಾಡಿದ್ದು ಗುರುಮೂರ್ತಿ ಅಮ್ಮಣ್ಣಾಯ ಮತ್ತು ರತ್ನ ಸಿಂಚನ ಅವರು ಸಹನಿರ್ದೇಶಕರಾಗಿದ್ದಾರೆ. ಉಪ್ಪಿನಂಗಡಿಯ ಸರ್ಗಂ ಸ್ಟುಡಿಯೋಸ್ ನ ಸಾತ್ವಿಕ್ ಪಡಿಯಾರ್ ಸಂಗೀತ ನೀಡಿದ್ದು ಪ್ರಸಾದ್ ಕೊಯಿಲ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಕಾರ್ತಿಕ್ ವರದರಾಜ್, ಅನೀಶ್ ಗಾಣಿಗ, ಕಿಶೋರ್ ಜೋಗಿ, ಅನುಷಾ ಜೋಗಿ ಪುರುಷರಕಟ್ಟೆ, ಅಚಲ್ ಉಬರಡ್ಕ, ಗುರುಮೂರ್ತಿ ಅಮ್ಮಣ್ಣಾಯ, ವಿಲ್ಮಾ ಸಿಸ್ಟರ್, ಲಲಿತಾ ಸಿಸ್ಟರ್, ದಿವಾಕರ ಸುರ್ಯ, ರಾಜೇಶ್ ಶಾಂತಿನಗರ, ರಾಜಶೇಖರ ಶಾಂತಿನಗರ, ಸಂದೀಪ್ ಆಚಾರ್ಯ, ಪ್ರಕಾಶ್ ಆಚಾರ್ಯ, ಜಯರಾಮ ಆಚಾರ್ಯ, ನವೀನ್ ಕುಲಾಲ್, ಕಿಶೋರ್ ನೀರಕಟ್ಟೆ, ಚಂದ್ರಶೇಖರ ಶೆಟ್ಟಿ,ಹರೀಶ್ ಭಂಡಾರಿ ಮತ್ತಿತರರು ತಾರಾಗಣದಲ್ಲಿದ್ದಾರೆ ಎಂದು ಯು.ಜಿ.ರಾಧ ಮಾಹಿತಿ ನೀಡಿದರು.
ಚಿತ್ರದ ನಟ, ನಿರ್ದೇಶಕ ಅಚಲ್ ಉಬರಡ್ಕ, ಸಹನಿರ್ದೇಶಕ ಗುರುಮೂರ್ತಿ ಅಮ್ಮಣ್ಣಾಯ ಮತ್ತು ತಾಂತ್ರಿಕ ಸಲಹೆಗಾರ ಅನೀಶ್ ಗಾಣಿಗ ಪತ್ರಿಕಾಗೋಷ್ಠಿಯಲ್ಲಿದ್ದರು.
ಎ.ಯು. ಕ್ರಿಯೇಶನ್ಸ್‌ನ ಪರಿಚಯ:
ಅಚಲ್ ಉಬರಡ್ಕ ಅವರ ಮುಂದಾಳತ್ವದ ಎ.ಯು. ಕ್ರಿಯೇಶನ್ಸ್ ಈಗಾಗಲೇ ಹಲವು ಕಿರುಚಿತ್ರಗಳನ್ನು ನಿರ್ಮಿಸಿ ಯಶಸ್ವಿಯಾಗಿದೆ. ಮೊದಲ ಕಿರುಚಿತ್ರ ಮೌನ. ಇದು ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಅಚಲ್ ಉಬರಡ್ಕ ಅವರು ವಿಧ್ಯಾಭ್ಯಾಸ ಮಾಡುವ ಸಮಯದಲ್ಲಿ ವಿದ್ಯಾರ್ಥಿಗಳು ಸೇರಿ ಮಾಡಿರುವ ಕಿರುಚಿತ್ರ. ಇದಕ್ಕೆ ರಾಷ್ಟ್ರ ಮಟ್ಟದ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ. ಎರಡನೇ ಕಿರುಚಿತ್ರ ಸಂಘಧ್ಯೇಯ. ಇದು ರಕ್ತದಾನ ಮಾಡಬೇಕು ಎಂದು ಸಂದೇಶ ಸಾರುವ ಕಿರುಚಿತ್ರ. ಮೂರನೇ ಪ್ರಾಜೆಕ್ಟ್ ಏನಾಗಿದೆ ನನ್ನ ಹೃದಯ ಆಲ್ಬಂ ಸಾಂಗ್. ನಾಲ್ಕನೇ ಪ್ರಾಜೆಕ್ಟ್ ಶಾಂತಿನಗರ ಕ್ಷೇತ್ರದೊಡೆಯನೇ ಕನ್ನಡ ಫ್ಯೂಷನ್ ಸಾಂಗ್. ಐದನೇ ಪ್ರಾಜೆಕ್ಟ್ ಪಥ. ಇದಕ್ಕೆ ರಾಜ್ಯ ಮಟ್ಟದ ಛಾಯಾಗ್ರಹಣ ಪ್ರಶಸ್ತಿ ದೊರೆತಿದೆ. ಇದೀಗ ಹೊಸ ಕಾಣಿಕೆ ಸೇವ್ ಅವರ್ ಸೋಲ್ ಲೋಕಾರ್ಪಣೆಗೊಳ್ಳಲಿದೆ.
ಅಚಲ್ ಉಬರಡ್ಕ ಅವರು ಪತ್ರಿಕೋದ್ಯಮ ಪದವೀಧರನಾಗಿದ್ದು ಕೋಡಿಂಬಾಡಿಯ ಶಾಂತಿನಗರ ನಿವಾಸಿಯಾಗಿದ್ದಾರೆ. ಉಪ್ಪಿನಂಗಡಿಯ ಶ್ರೀರಾಮ ಶಾಲೆಯ ಸಂಚಾಲಕರೂ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ನಿಕಟಪೂರ್ವ ಆಡಳಿತ ಮೊಕ್ತೇಸರರೂ ಆಗಿರುವ ಉಪ್ಪಿನಂಗಡಿಯ ಬ್ಯಾಂಕ್ ರೋಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೈಲಾರ್ ಮೆಡಿಕಲ್ಸ್ ಮಾಲಕ ಯು.ಜಿ. ರಾಧರವರ ಪುತ್ರ.