ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸಿನಿಮಾ

ಯುವ ರಾಜ್‌ಕುಮಾರ್ – ಶ್ರೀದೇವಿ ವೈವಾಹಿಕ ಜೀವನದಲ್ಲಿ ಬಿರುಕು; ಡಿವೋರ್ಸ್‌ಗೆ ಅರ್ಜಿ ಸಲ್ಲಿಕೆ

Published

on

ಬೆಂಗಳೂರು: ಡಾ.ರಾಜ್‌ ಕುಮಾರ್‌ ಕುಟುಂಬದ ಯುವಕುಡಿ, ರಾಘವೇಂದ್ರ ರಾಜ್‌ ಕುಮಾರ್‌ ಅವರ ಮಗ ಯುವರಾಜ್(ಗುರು ರಾಜ್‌ ಕುಮಾರ್)‌ ದಾಂಪತ್ಯ ಜೀವನ ವಿಚ್ಚೇದನ ಹಂತಕ್ಕೆ ಬಂದಿದೆ.

ಯುವರಾಜ್ ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ವಿಚ್ಚೇದನದ ನೋಟಿಸ್‌ ಕಳುಹಿಸಿದ್ದಾರೆ. ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲಿದ್ದಾರೆ.

ವಿಚ್ಚೇನಕ್ಕೆ ಕಾರಣವೇನು? : ಜೂ.6 ರಂದು ಯುವರಾಜ್‌ ಕುಮಾರ್‌ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪರಸ್ಪರ ಪ್ರೀತಿಸಿ ವಿವಾಹವಾಗಿದ್ದ ಜೋಡಿ ಈಗ ವಿಚ್ಚೇದನಕ್ಕೆ ಬಂದು ತಲುಪಿದ್ದಾರೆ.

ಅಗೌರವ ಹಾಗೂ ಮಾನಸಿಕ ಕ್ರೌರ್ಯ ಎಂದು ಆರೋಪಿಸಿ ವಿಚ್ಚೇನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಜುಲೈ 4 ರಂದು ಫ್ಯಾಮಿಲಿನ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದೆ.

 

ರಾಜ್‌ ಕುಮಾರ್‌ ಕುಡಿ ಜೊತೆ ವಿವಾಹ: ಯಾರು ಈ ಶ್ರೀದೇವಿ? : ಯುವರಾಜ್‌ ಕುಮಾರ್‌ ಹಾಗೂ ಶ್ರೀದೇವಿ ಅವರದು ಲವ್‌ ಮ್ಯಾರೇಜ್.‌ ಇಬ್ಬರು ಪರಸ್ಪರ ಸ್ನೇಹಿತರಾಗಿ ಆ ಬಳಿಕ ಪ್ರೀತಿಸಿ ಮದುವೆ ಆದವರು. 7 ವರ್ಷದ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು.

ಇಬ್ಬರು ಮೊದಲು ದೆಹಲಿಯಲ್ಲಿ ಭೇಟಿ ಆಗಿದ್ದರು ಎನ್ನಲಾಗಿದೆ.

ಶ್ರೀದೇವಿ ಭೈರಪ್ಪ ಮೂಲತಃ ಮೈಸೂರಿನವರು. ಅವರ ಶಿಕ್ಷಣ ಹಾಗೂ ಉನ್ನತ ವ್ಯಾಸಂಗ ಮೈಸೂರಿನಲ್ಲೇ ಆಗಿದೆ. ಶ್ರೀದೇವಿ ಡಾ. ರಾಜ್ ಕುಮಾರ್ ಅವರ ಕುಟುಂಬ ನಡೆಸುತ್ತಿರುವ ಸಿವಿಲ್ ಸರ್ವೀಸ್ ಅಕಾಡೆಮಿ ಉಸ್ತುವಾರಿ ವಹಿಸಿಕೊಂಡಿದ್ದರು.

ಯುವರಾಜ್‌ ಕುಮಾರ್‌ ಅವರಿಗೆ ಪರಿಚಯವಿದ್ದ ಶ್ರೀದೇವಿ ಮೊದಲು ಸ್ನೇಹಿತೆಯಾಗಿದ್ದರು. ಆ ಬಳಿಕ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಪರಸ್ಪರ 7 ವರ್ಷ ಪ್ರೀತಿಸುತ್ತಿದ್ದರು. ಯುವರಾಜ್‌ ಕುಮಾರ್‌ ಅವರ ಬೆಂಬಲವಾಗಿ ನಿಂತಿದ್ದ ಶ್ರೀದೇವಿ ವಿನಯ್‌ ರಾಜ್‌ ಕುಮಾರ್‌ ಅವರ ʼರನ್‌ ಆಂಟನಿʼ ಸಿನಿಮಾದ ಪ್ರಚಾರದಲ್ಲೂ ಪರೋಕ್ಷವಾಗಿ ಭಾಗಿಯಾಗಿದ್ದರು ಎನ್ನಲಾಗಿದೆ.

2019 ರಲ್ಲಿ ಎರಡು ಕುಟುಂಬದ ಒಪ್ಪಿಗೆಯ ಮೇಲೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.  ಸೊಸೆ ಶ್ರೀದೇವಿಯನ್ನು ಮಗಳಂತೆ ನೋಡಿಕೊಂಡು, ಪ್ರೀತಿಯಿಂದ ರಾಘವೇಂದ್ರ ರಾಜ್‌ ಕುಮಾರ್‌ ಶ್ರೀದೇವಿಯನ್ನು ಮಗಳೇ ಎಂದೇ ಕರೆಯುತ್ತಿದ್ದರು ಎನ್ನಲಾಗಿದೆ.

ಮುಂದಿನ ದಿನಗಳಲ್ಲಿ ಶ್ರೀದೇವಿ ಡಾ. ರಾಜ್‌ಕುಮಾರ್ ಸಿವಿಲ್ ಅಕಾಡೆಮಿಯ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದರು.

‘’ಕಳೆದ ಕೆಲವು ತಿಂಗಳಿಂದ ಆದ ಅನೇಕ ನೋವುಗಳ ಹೊರತಾಗಿಯೂ, ನಾನು ಕುಟುಂಬದ ಗೌರವ ಕಾಪಾಡಿಕೊಳ್ಳಲು, ಮೌನವಾಗಿದ್ದೆ. ಆದರೆ ನನ್ನ ಸಭ್ಯತೆ ಹಾಗೂ ಮಾನವೀಯತೆಯನ್ನು ಗೌರವಿಸದೆ, ಕೀಳು ಮಟ್ಟದ ಆರೋಪಗಳನ್ನು ಮಾಡುತ್ತಿರುವುದು ದುರದೃಷ್ಟಕರ. ಸತ್ಯ ಮತ್ತು ನ್ಯಾಯವು ಖಂಡಿತ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ’’ ಎಂದು ಸೋಷಿಯಲ್ ಮೀಡಿಯಾದಲ್ಲಿ ಶ್ರೀದೇವಿ ಭೈರಪ್ಪ ಬರೆದುಕೊಂಡಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version