ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸಿನಿಮಾ

ಕಿರುತೆರೆ ನಟಿ ಜೊತೆ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಕ್ರಿಕೆಟಿಗ ಶುಭ್‌ಮನ್‌ ಗಿಲ್‌..!!

Published

on

ಮುಂಬೈ/ಮಂಗಳೂರು: ಕಿರುತೆರೆ ನಟಿ ರಿಧಿಮಾ ಪಂಡಿತ್‌ ರವರು ಟೀಂ ಇಂಡಿಯಾ ಕ್ರಿಕೆಟಿಗನನ್ನು ವರಿಸಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಹೌದು, ಟೀಂ ಇಂಡಿಯಾ ಸೆಂಸೇಷನಲ್ ಬಾಯ್‌ ಶುಭ್‌ಮನ್ ಗಿಲ್‌ ಜೊತೆ ಮದುವೆಯಾಗಲಿದ್ದಾರೆ. ಇದೇ 2024ರ ಡಿಸೆಂಬರ್ ನಲ್ಲಿ ಮದುವೆ ಮಂಟಪ ಏರಲಿದ್ದಾರೆ ಎಂಬ ಸುದ್ದಿ ಹರಡಿದೆ.

ರಿಧಿಮಾ ಬಣ್ಣದ ಲೋಕಕ್ಕೆ ಬಂದು 8 ವರ್ಷಗಳು ಕಳೆದಿವೆ. ‘ಬಹು ಹಮಾರಿ ರಜ್ನಿ ಕಾಂತ್’ ಅವರ ನಟನೆಯ ಮೊದಲ ಧಾರಾವಾಹಿ. ಇದು 2016ರಲ್ಲಿ ಪ್ರಸಾರ ಕಂಡಿತು. ಆ ಬಳಿಕ ಅವರು ಹಲವು ಹಿಂದಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅವರಿಗೆ ಕೆಲವು ಅವಾರ್ಡ್​ಗಳು ಬಂದಿವೆ. ರಿಧಿಮಾಗೆ 33 ವರ್ಷ ವಯಸ್ಸು. ಶುಭಮನ್‌ ಗೆ 24ವರ್ಷವಾಗಿದ್ದು, ಇವರಿಬ್ಬರ ಮಧ್ಯೆ ಒಂಭತ್ತು ವರ್ಷಗಳ ಅಂತರವಿದೆ.

ಇನ್ನು ಈ ಬಗ್ಗೆ ರಿಧಿಮಾ ಪ್ರತಿಕ್ರಿಯೆ ನೀಡಿದ್ದು, ಈ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ‘ ನನಗೆ ಮುಂಜಾನೆ ಪತ್ರಕರ್ತರಿಂದ ಫೋನ್‌ಗಳು ಬಂದವು. ನನ್ನ ಮದುವೆ ಕುರಿತಾಗಿ ಪ್ರಶ್ನೆಗಳನ್ನು ಮಾಡಿದ್ರು. ನನ್ನ ಜೀವನದಲ್ಲಿ ಮುಖ್ಯ ಘಟ್ಟವನ್ನು ತಲುಪುವಾಗ ನಾನೇ ತಿಳಿಸುತ್ತೇನೆ’ ಎಂದು ಹೇಳುವ ಮೂಲಕ ಇವರಿಬ್ಬರ ಮದುವೆ ವದಂತಿಯನ್ನು ಅಲ್ಲಗೆಳೆದಿದ್ದಾರೆ.

ಆದರೆ ಇದರಿಂದಾಗಿ ಅಭಿಮಾನಿಗಳಂತೂ ನಿಟ್ಟುಸಿರು ಬಿಟ್ಟಿದ್ದಾರೆ. ಈ ಹಿಂದೆ ಮಾಜಿ ಕ್ರಿಕೆಟ್ ಆಡಗಾರ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಜೊತೆ ಶುಭ್‌ಮನ್‌ ಡೇಟಿಂಗ್‌ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಹೋಟೆಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇವರಿಬ್ಬರ ನಡುವೆ ಪ್ರೇಮಾಂಕುರವೂ ಇದೆ ಎಂಬ ಮಾತು ಕೇಳಿ ಬರುತ್ತಿದೆ.  ಈ ಮಧ್ಯೆ ರಿಧಿಮಾ ಜೊತೆ ಶುಭ್‌ಮನ್ ಮದುವೆ ಎಂಬ ವದಂತಿ ಹಬ್ಬಿದ ಬಳಿಕ ಇವರಿಬ್ಬರ ನಡುವೆ ಬ್ರೇಕ್‌ಅಪ್ ಆಯಿತೆ..? ಎಂಬ ಪ್ರಶ್ನೆ  ಎಲ್ಲರಲ್ಲೂ ಮೂಡಿತ್ತು.

ಶುಭ್‌ಮನ್ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ರಶ್ಮಿಕಾ ಮಂದಣ್ಣ ಮೇಲೆ ಕ್ರಶ್ ಆಗಿದೆ ಎಂದು ಅವರು ಹೆಳಿಕೊಂಡಿದ್ದಾಗಿ ವರದಿಯಾಗಿತ್ತು. ಆ ಬಳಿಕ ಅವರು ಹಾಗೆ ನಾನು ಹೇಳಲಿಲ್ಲ. ಅದು ಸುಳ್ಳು ಎಂದು ಅಲ್ಲಗೆಳೆದಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version