ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ವಾಣಿಜ್ಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸಿನಿಮಾ ಸ್ಥಳೀಯ
ಮಾ.1 ; ಕರಾವಳಿಗರ ಮನೆ-ಮನದ ದುಬೈ ಕಥೆ; ಪ್ರವಾಸಿ ಜೀವನಕ್ಕೆ ಜೀವ ತುಂಬಿದ ಪುರುಷ..! ''ಪುರುಷೋತ್ತಮನ ಪ್ರಸಂಗ'" ಅಮೋಘ ಆರಂಭಅಭಿನಂದನೆ ಅಭಿಪ್ರಾಯ ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ವಿಶೇಷ ವರದಿ ಸಭೆ - ಸಮಾರಂಭ ಸಾಮಾನ್ಯ ಸಿನಿಮಾ ಸ್ಥಳೀಯ
ಪುತ್ತೂರಿನ ಯುವ ನಿರ್ದೇಶಕ ಕಿಶನ್ ಬಲ್ನಾಡ್ ನಿರ್ದೇಶನದಲ್ಲಿ ಹೊಸ ಚಲನಚಿತ್ರದ ಮುಹೂರ್ತ.Published
8 months agoon
By
Akkare News
ಮಂಗಳೂರು: ಸುನಿ ಸಿನಿಮಾಸ್ (ಸಿಂಪಲ್ ಸುನಿ) ಅರ್ಪಿಸುವ ಸಹ್ಯಾದ್ರಿ ಸ್ಟುಡಿಯೋಸ್ ನಿರ್ಮಾಣದ ‘ಜಂಗಲ್ ಮಂಗಲ್’ ಸಿನಿಮಾ ಜುಲೈ 4 ರಂದು ರಾಜ್ಯಾದ್ಯಂತ ತೆರೆಕಾಣಲಿದೆ
ರಕ್ಷಿತ್ ಕುಮಾರ್ ಸಿನಿಮಾವನ್ನು ನಿರ್ದೇಶಿಸಿದ್ದು ತಾರಾಗಣದಲ್ಲಿ ಯಶ್ ಶೆಟ್ಟಿ, ಉಗ್ರಂ ಮಂಜು, ಹರ್ಷಿತಾ ರಾಮಚಂದ್ರ, ಬಲ ರಾಜವಾಡಿ, ದೀಪಕ್ ರೈ ,ಪಾಣಾಜೆ ಚಂದ್ರಹಾಸ್ ಉಳ್ಳಾಲ್ ಅಭಿನಯಿಸಿದ್ದಾರೆ.
ಛಾಯಾಗ್ರಹಣ: ವಿಷ್ಣುಪ್ರಸಾದ್, ಸಂಗೀತ: ಪ್ರಸಾದ್ ಶೆಟ್ಟಿ, ಪೂರ್ಣಚಂದ್ರ ತೇಜಸ್ವಿ, ಸಂಕಲನ: ಮನು ಶೇಡ್ಗಾರ್, ಕಲಾ ನಿರ್ದೇಶನ: ವರದರಾಜ್ ಕಾಮತ್.
ಪೂರ್ತಿಯಾಗಿ ಸುಳ್ಯ ತಾಲೂಕಿನ ಗುತ್ತಿಗಾರು ಬಳಿಯ ಮಡಪ್ಪಾಡಿ ಎಂಬಲ್ಲಿ ಸತತ 30 ದಿನಗಳ ಚಿತ್ರೀಕರಣ ನಡೆದಿದೆ.
ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳ್ಳಾರ್ ಚಂದ್ರಹಾನ್ ಉಳ್ಳಾಲ್ ಇತ್ಯಾದಿ ಕರಾವಳಿಯ ಹಲವು ಪ್ರತಿಭಾನ್ವಿತ ನಟರ ಜೊತೆಗೆ ಚಿತ್ರೀಕರಣ ನಡೆದ ಮಡಪ್ಪಾಡಿಯ ಒಂದಷ್ಟು ಗ್ರಾಮಸ್ಥರು ಕೂಡ ನಟಿಸಿರುವುದು ವಿಶೇಷ.
ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಇತ್ಯಾದಿ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ವಿಷ್ಣುಪ್ರಸಾದ್, ಅಮ್ಮೆರ್ ಪೋಲಿ ಸಾ.? ಇತ್ಯಾದಿ ಚಿತ್ರಗಳಿಗೆ ಸಂಗೀತ ನೀಡಿರುವ ಪ್ರಸಾದ್ ಕೆ ಶೆಟ್ಟಿ, ಇಂಗ್ಲಿಷ್, ಅಮ್ಮೆರ್ ಪೋಲಿನಾ.? ಇತ್ಯಾದಿ ಸಿನಿಮಾಗಳಿಗೆ ಸಂಕಲನ ಮಾಡಿರುವ ಮನು ಶೇಡ್ಯಾರ್ ಸೇರಿದಂತೆ ಕಲಾವಿದರು, ತಂತ್ರಜ್ಞರಲ್ಲಿ 80% ಕರಾವಳಿಯ ಪ್ರತಿ ಭಾನ್ವಿತರಿದ್ದಾರೆ.
ಸುತ್ತ ದಟ್ಟ ಕಾಡಿನಿಂದ ಸುತ್ತುವರೆದು, ಕಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಸಣ್ಣ ಊರೊಂದರಲ್ಲಿ ನಡೆಯುವ ಮಜವಾದ ಘಟನೆಯನ್ನು ಒಳಗೊಂಡಿರುವ ಚಿತ್ರ. ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಸಣ್ಣ ಹಳ್ಳಿ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನ ಕಾಡಿನಲ್ಲಿ ಸಂಪೂರ್ಣವಾಗಿ ಚಿತ್ರೀಕರಣ ನಡೆದಿದೆ. ಇದೇ ಜುಲೈ 4ರಂದು ರಾಜ್ಯಾದ್ಯಂತ “ಜಂಗಲ್ ” ಮಂಗಲ್” ತೆರೆಗೆ ಬರಲಿದೆ