ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ವಾಣಿಜ್ಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸಿನಿಮಾ ಸ್ಥಳೀಯ
ಮಾ.1 ; ಕರಾವಳಿಗರ ಮನೆ-ಮನದ ದುಬೈ ಕಥೆ; ಪ್ರವಾಸಿ ಜೀವನಕ್ಕೆ ಜೀವ ತುಂಬಿದ ಪುರುಷ..! ''ಪುರುಷೋತ್ತಮನ ಪ್ರಸಂಗ'" ಅಮೋಘ ಆರಂಭಅಭಿನಂದನೆ ಅಭಿಪ್ರಾಯ ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ವಿಶೇಷ ವರದಿ ಸಭೆ - ಸಮಾರಂಭ ಸಾಮಾನ್ಯ ಸಿನಿಮಾ ಸ್ಥಳೀಯ
ಪುತ್ತೂರಿನ ಯುವ ನಿರ್ದೇಶಕ ಕಿಶನ್ ಬಲ್ನಾಡ್ ನಿರ್ದೇಶನದಲ್ಲಿ ಹೊಸ ಚಲನಚಿತ್ರದ ಮುಹೂರ್ತ.Published
10 months agoon
By
Akkare Newsಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.. ಕೊಲೆ ಕೇಸ್‌ನಲ್ಲಿ ಕಾನೂನು ಕುಣಿಕೆ ಬಿಗಿಯಾಗುತ್ತಿರೋ ಹೊತ್ತಲ್ಲೇ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆ ಡೆಮಾಲಿಸ್ ಆಗುವ ಸಾಧ್ಯತೆ ಇದೆ.
ದರ್ಶನ್ ಮನೆ ಡೆಮಾಲಿಸ್ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಯಾರೇ ಸ್ಟೇ ತಂದಿದ್ದರೂ ಕಾನೂನು ಪ್ರಕಾರ ಕ್ರಮ ವಹಿಸಿ ತೆರವು ಮಾಡ್ತೀವಿ. ಕಾನೂನು ಪ್ರಕಾರ ಏನು ಮಾಡಬೇಕೋ ಮಾಡ್ತೀವಿ ಎಂದು ಹೇಳಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಣ್ಣವರು, ದೊಡ್ಡವರು ಅಂತಾ ನೋಡಲ್ಲ ತೆರವು ಮಾಡ್ತೇವೆ ಎಂದು ಹೇಳಿದ್ದಾರೆ. ಸ್ಟೇ ಇತ್ತು ಅಂತ ನಾವು ವೆಕೆಟ್ ಮಾಡಿರಲಿಲ್ಲ, ಸ್ಟೇ ತೆರವು ಮಾಡಿ ಕಾರ್ಯಾಚರಣೆ ಮಾಡ್ತೀವಿ ಎಂದಿದ್ದಾರೆ.
ಆರ್‌ಆರ್ ನಗರದಲ್ಲಿ ದರ್ಶನ್ ಅವರ ಮನೆ ಇದೆ. ಐಡಿಯಲ್ ಹೋಮ್ಸ್ ಲೇಔಟ್‌ನಲ್ಲಿ ತೂಗುದೀಪ ಹೆಸರಿನ ಮನೆ ಇದ್ದು, ಅದನ್ನು ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.ಅದೇ ಜಾಗದಲ್ಲಿ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವು ಘಟಾನುಘಟಿ ನಾಯಕರು, ಪ್ರಭಾವಿಗಳ ಮನೆ, ಕಟ್ಟಡಗಳಿದ್ದು, ಅವೆಲ್ಲವೂ ಒತ್ತುವರಿ ಜಾಗದಲ್ಲಿ ನಿರ್ಮಾಣವಾಗಿದೆ ಎನ್ನಲಾಗಿದೆ. ಬಿಬಿಎಂಪಿ ಇಂತಹ 67 ಅಕ್ರಮ ಕಟ್ಟಡಗಳನ್ನು ಗುರುತಿಸಿದ್ದು, ತೆರವಿಗೆ ಮುಂದಾಗಿತ್ತು. ಆದರೆ ಕೋರ್ಟ್‌ನಿಂದ ಸ್ಟೇ ತರಲಾಗಿತ್ತು.
ಈ ಹಿಂದೆ ರಾಜಕಾಲುವೆ ಒತ್ತುವರಿ ಕಾರ್ಯಾಚರಣೆ ಬಿಬಿಎಂಪಿಯಿಂದ ದೊಡ್ಡಮಟ್ಟದಲ್ಲಿ ನಡೆದಿತ್ತು. ಬೆಂಗಳೂರಿನ ಹಲವೆಡೆದೆ ಒತ್ತುವರಿ ಜಾಗದಲ್ಲಿ ಕಟ್ಟಿದ್ದ ಜನ ಸಾಮಾನ್ಯರ ಮನೆ, ಕಟ್ಟಡಗಳನ್ನು ಡೆಮಾಲಿಷ್ ಮಾಡಲಾಗಿತ್ತು.