Connect with us

ಇಂದಿನ ಕಾರ್ಯಕ್ರಮ

ಇಂದು “ನವೋದಯ ರಜತ ಸಂಭ್ರಮ

Published

on

ಸಮವಸ್ತ್ರದಲ್ಲಿ 1.50 ಲಕ್ಷ ಮಹಿಳೆಯರು ಭಾಗವಹಿಸುವ ಸಮಾವೇಶ

ಮಂಗಳೂರು: ಗ್ರಾಮೀಣಾ ಭಿವೃದ್ಧಿಯಲ್ಲಿ ಹೊಸ ಮನ್ವಂತರ ಬರೆದು ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿದ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಸಂಸ್ಥಾಪನೆಯ ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ ನೇತೃತ್ವದ “ನವೋದಯ ಸ್ವ-ಸಹಾಯಗುಂಪುಗಳ “ರಜತ ಸಂಭ್ರಮ’ ಕಾರ್ಯಕ್ರಮ ಮೇ 10ರಂದು ಬಂಗ್ರಕೂಳೂರಿನ ಗೋಲ್ಡ್‌ ಫಿಂಚ್‌ ಸಿಟಿ ಮೈದಾನದಲ್ಲಿ ನಡೆಯಲಿದೆ.

“ಒಂದೇ ಬಣ್ಣದ ಸಮವಸ್ತ್ರದಲ್ಲಿ 1.50ಲಕ್ಷ ಮಹಿಳೆಯರು ಇದೇ ಮೊದಲ ಬಾರಿಗೆ ಒಂದೇ ಸ್ಥಳದಲ್ಲಿ ಸೇರುವ ಮೂಲಕ ದೇಶದಲ್ಲೇ ಮೊದಲ ಐತಿ ಹಾಸಿಕ ಸಮಾವೇಶವೆಂಬ ದಾಖಲೆಗೆ ನವೋದಯ ರಜತ ಸಂಭ್ರಮ ಸಾಕ್ಷಿ ಯಾಗಲಿದೆ’ ಎಂದು ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ತಿಳಿಸಿದ್ದಾರೆ.

 

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶುಕ್ರವಾರ ಬಂಗ್ರಕೂಳೂರು ಮೈದಾನದಲ್ಲಿ ಅಂತಿಮ ಸಿದ್ಧತೆಯನ್ನು ವೀಕ್ಷಿಸಿದ ಅವರು ಸುದ್ದಿಗಾರರ ಜತೆಗೆ ಮಾತನಾಡಿ, ಲಕ್ಷಾಂತರ ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳಲು ನವೋದಯ ಸ್ವಸಹಾಯ ಸಂಘ ನೆರವಾಗಿದೆ. ಈ ಎಲ್ಲ ಮಹಿಳೆಯರು ರಜತ ಸಂಭ್ರಮಕ್ಕೆ ಸ್ವಯಂಪ್ರೇರಿತರಾಗಿ ಆಗಮಿಸುವರು. ಬೆಳಗ್ಗೆ 10ಕ್ಕೆ ಕಾರ್ಯಕ್ರಮ ಆರಂಭವಾಗಿ ಮಧ್ಯಾಹ್ನ 1.30ರ ವರೆಗೆ ಕಾರ್ಯಕ್ರಮವಿರಲಿದೆ. ಈ ಸಮಾವೇಶವು ನವೋದಯದ ಎಲ್ಲ ಗುಂಪುಗಳಿಗೆ, ಸಹಕಾರಿ ಕ್ಷೇತ್ರಕ್ಕೆ, ದಕ್ಷಿಣ ಕನ್ನಡ ಹಾಗೂ ರಾಜ್ಯಕ್ಕೆ ಅದ್ಭುತ ಸಂದೇಶವನ್ನು ನೀಡಲಿದೆ ತಿಳಿಸಿದರು.

ರಾಜ್ಯಪಾಲರು, ಗಣ್ಯರ ಉಪಸ್ಥಿತಿ
ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್‌ ಶೆಟ್ಟಿ ಬೆಳಪು ಮಾತನಾಡಿ, ಈ ಸಮಾವೇಶ ಚಾರಿತ್ರಿಕ ಸಂದೇಶವನ್ನು ದೇಶಕ್ಕೆ ನೀಡಲಿದೆ. ಬೃಹತ್‌ ವೇದಿಕೆ, ಸಭಾಂಗಣ ನಿರ್ಮಿಸಲಾಗಿದೆ. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್, ಡಿಸಿಎಂ ಡಿ.ಕೆ. ಶಿವಕುಮಾರ್‌ ಸಹಿತ ವಿವಿಧ ಕ್ಷೇತ್ರದ ಗಣ್ಯರು, ಸ್ವಾಮೀಜಿಗಳು ಭಾಗವಹಿಸುವರು ಎಂದರು.

ಸಮಿತಿ ಕಾರ್ಯಾಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೋಟ್ಟು, ನವೋದಯ ಟ್ರಸ್ಟಿ ಗಳಾದ ಮೇಘರಾಜ್‌ ಆರ್‌. ಜೈನ್‌, ಸುನಿಲ್‌ ಕುಮಾರ್‌ ಬಜಗೋಳಿ, ಉದ್ಯಮಿ ಜಯಪ್ರಕಾಶ್‌ ತುಂಬೆ, ಪುಷ್ಪರಾಜ್‌ ಜೈನ್‌, ಎಸ್‌ಸಿಡಿಸಿಸಿ ಬ್ಯಾಂಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್‌ ಕೆ., ನವೋದಯ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ರಾಜು ಪೂಜಾರಿ ಉಪಸ್ಥಿತರಿದ್ದರು.

8 ಅಡಿ ಎತ್ತರದ ಪ್ರಧಾನ ವೇದಿಕೆ
ಸಮಾವೇಶದ ಸಭಾ ವೇದಿಕೆ 8 ಅಡಿ ಎತ್ತರ, 180 ಅಡಿ ಉದ್ದ ಹಾಗೂ 90 ಅಡಿ ಅಗಲವಿದೆ. ಈ ಪ್ರಧಾನ ವೇದಿಕೆಯಲ್ಲಿ 77 ಮಂದಿ ಅತಿಥಿಗಳು ಉಪಸ್ಥಿತರಿರುತ್ತಾರೆ. ಪ್ರಧಾನ ವೇದಿಕೆಯ ಎಡ-ಬಲ ಭಾಗಗಳಲ್ಲಿ 170 ಮಂದಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಸಹಕಾರಿ ಧುರೀಣರು ಭಾಗವಹಿಸುವರು. ಸಮಾವೇಶದಲ್ಲಿ ಭಾಗವಹಿಸುವ ಜನರಿಗೆ ಅನುಕೂಲವಾಗಲು 1 ಲಕ್ಷಕ್ಕೂ ಅಧಿಕ ಕುರ್ಚಿಗಳನ್ನು ಇಡಲಾಗಿದೆ. 7 ಸಾವಿರ ಮಂದಿಗೆ ಕುಳಿತುಕೊಳ್ಳಲು ಸೋಫಾಗಳ ವ್ಯವಸ್ಥೆ ಇದೆ. ಎಲ್ಲ ಕುರ್ಚಿಗಳಲ್ಲಿ ನೀರು, ಬಿಸ್ಕೆಟ್‌, ಚಾಕೋಲೆಟ್‌ ಪೊಟ್ಟಣ ಲಭ್ಯವಿರಲಿದೆ.

5 ಕಡೆ ಉಪಹಾರ ವ್ಯವಸ್ಥೆ
ಸಮಾವೇಶಕ್ಕೆ ದೂರದೂರಿನಿಂದ ಬರುವವರಿಗೆ ಬೆಳಗ್ಗೆ ವಿವಿಧೆಡೆ ಉಪಾಹಾರ ವ್ಯವಸ್ಥೆ ಇರಲಿದೆ. ಸುಮಾರು 25 ಸಾವಿರ
ಮಂದಿಗೆ ಬಂಟ್ವಾಳ ಬಂಟರ ಭವನದಲ್ಲಿ, 25 ಸಾವಿರ ಮಂದಿಗೆ ಫರಂಗಿಪೇಟೆ ಯಶಸ್ವಿ ಸಭಾಭವನದಲ್ಲಿ, ಪಡುಬಿದ್ರಿ ಬಂಟರ ಭವನದಲ್ಲಿ 30 ಸಾವಿರ ಮಂದಿಗೆ, ವಾಮಂಜೂರಿನಲ್ಲಿ 20 ಸಾವಿರ ಮಂದಿಗೆ ಹಾಗೂ ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ 25 ಸಾವಿರ ಮಂದಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.

ಲಕ್ಷಕ್ಕೂ ಅಧಿಕ ಮಂದಿಗೆ ಊಟೋಪಚಾರ
ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರಧಾನ ವೇದಿಕೆಯ ಬಲಭಾಗದಲ್ಲಿ ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, 160 ಕೌಂಟರ್‌ಗಳಿರಲಿವೆ. ನೂರಾರು ಮಂದಿ ಬಾಣಸಿಗರು ಊಟೋಪಚಾರ ತಯಾರಿಯಲ್ಲಿ ಪಾಲ್ಗೊಂಡಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version