Connect with us

ಇಂದಿನ ಕಾರ್ಯಕ್ರಮ

ಎವಿಜಿ – ವಾಲ್ಮೀಕಿ ಜಯಂತಿ ಆಚರಣೆ

Published

on

ಬನ್ನೂರು: ಇಲ್ಲಿನ ಅಲುಂಬುಡ ಕೃಷ್ಣ ನಗರ ದಲ್ಲಿ ಕಾರ್ಯಾಚರಿಸುತ್ತಿರುವ ಎವಿಜಿ ಆಂಗ್ಲಮಾಧ್ಯಮ ಶಾಲೆಯಲ್ಲಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕುಂದಾಪುರ ಭಂಡಾರ್ಸ್ ಕಾರ್ ಕಾಲೇಜಿನ ನಿವೃತ್ತ ಪ್ರೊಫೆಸರ್ ಆಗಿರುವ ಡಾ-ಮೋತಿಬಾಯಿ ಅವರು ವಾಲ್ಮೀಕಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶುಭ ಹಾರೈಸಿದರು.


ಆಡಳಿತ ಅಧಿಕಾರಿ ಗುಡ್ಡಪ್ಪಗೌಡ ಬಲ್ಯ ದಿನದ ಮಹತ್ವವನ್ನು ತಿಳಿಸಿ, ಬದಲಾವಣೆಯನ್ನು ಬಯಸುವವರಿಗೆ ವಾಲ್ಮೀಕಿಯ ಬದುಕು ಸೂಕ್ತ ಉದಾಹರಣೆ .ದರೋಡೆಕೋರನಾಗಿದ್ದ ರತ್ನಾಕರನು ವಾಲ್ಮೀಕಿಯಾಗಿ ಪರಿವರ್ತನೆಯಾಗಿ ಭಾರತದ ಮಹಾನ್ ಗ್ರಂಥವಾದ ರಾಮಾಯಣ ರಚಿಸುವಲ್ಲಿ ಕಾರಣನಾಗಿ ಶ್ರೇಷ್ಠ ಸಂತನಾಗಿ ಎಲ್ಲರೂ ನೆನಪಿಸಿಕೊಳ್ಳುವಂತಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಡಳಿತ ಸಮಿತಿ ಉಪಾಧ್ಯಕ್ಷರಾದ ಉಮೇಶ್ ಮಲುವೆಲು ವಹಿಸಿದ್ದರು‌. ವೇದಿಕೆಯಲ್ಲಿ ಸಂಚಾಲಕರಾದ ಎ. ವಿ ನಾರಾಯಣ,ಆಡಳಿತಾಧಿಕಾರಿಯಾದ ಗುಡಪ್ಪ ಗೌಡ ಬಲ್ಯ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗ್ಡೆ, ನಿರ್ದೇಶಕರಾದ ಪ್ರತಿಭಾ ದೇವಿ, ಮುಖ್ಯೋಪಾಧ್ಯಾಯರಾದ ಅಮರನಾಥ ಪಟ್ಟೆ ಉಪಸ್ಥಿತರಿದ್ದರು. ಶಿಕ್ಷಕಿ ಹರ್ಷಿತಾ ರವರು ಸ್ವಾಗತಿಸಿ, ಶಿಕ್ಷಕಿ ತೀರ್ಥರವರು ವಂದಿಸಿದರು. ಶಿಕ್ಷಕಿ ಚಂದ್ರಿಕಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗ್ಡೆ ಅವರು ಎಲ್ಲರಿಗೂ ಸಿಹಿತಿಂಡಿ ಹಂಚಿದರು.



 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version