ಬೆಂಗಳೂರು: ಇತಿಹಾಸ ಪ್ರಸಿದ್ದ ಕರಾವಳಿ ಕಂಬಳಕ್ಕೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‍ನಲ್ಲಿ ಕೌಂಟ್‍ಡೌನ್ ಶುರುವಾಗಿದೆ.
ಇಂದಿನಿಂದ (ಶನಿವಾರ) 2 ದಿನಗಳ ಕಾಲ ನಡೆಯುವ ರೋಚಕ ಕಂಬಳಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದೆ. ಕಂಬಳ ವೀಕ್ಷಣೆಗೆ ಲಕ್ಷಾಂತರ ಜನ ಬರುವ ನಿರೀಕ್ಷೆಯಿದ್ದು, ಹೆಬ್ಬಾಳ ರಸ್ತೆಯಲ್ಲಿ ಟ್ರಾಫಿಕ್ ಉಂಟಾಗುವ ನಿರೀಕ್ಷೆ ಇದೆ. ಹೀಗಾಗಿ ಸಂಚಾರದಲ್ಲಿ ಟ್ರಾಫಿಕ್ ಪೊಲೀಸರು ಒಂದಷ್ಟು ಬದಲಾವಣೆ ಮಾಡಿದ್ದಾರೆ.
ಬದಲಿ ಮಾರ್ಗ ಬಳಸಲು ಸೂಚನೆ ನೀಡಿದ್ದಾರೆ. ಕಂಬಳಕ್ಕೆ ಬರುವ ಸಾರ್ವಜನಿಕರ ವಾಹನಗಳಿಗೆ ಕೃಷ್ಣವಿಹಾರ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಬದಲಿ ಮಾರ್ಗ: ಅರಮನೆ ರಸ್ತೆಯಿಂದ- ಮೈಸೂರು ಬ್ಯಾಂಕ್ ಸರ್ಕಲ್, ಎಂವಿ ಜಯರಾಮ ರಸ್ತೆ- ಅರಮನೆ ರಸ್ತೆ, ಬಳ್ಳಾರಿ ರಸ್ತೆ- ಮೇಖ್ರಿ ಸರ್ಕಲ್ ನಿಂದ ಎಲ್ ಆರ್ ಡಿಇ ಜಂಕ್ಷನ್ ವರೆಗೆ, ಕನ್ನಿಂಗ್ ಹ್ಯಾಮ್ ರಸ್ತೆ- ಬಾಳೆಕುಂದ್ರಿ ಸರ್ಕಲ್ ನಿಂದ ಲೀ ಮೆರಿಡಿಯನ್ ಅಂಡರ್ ಪಾಸ್, ಮಿಲ್ಲರ್ ರಸ್ತೆಯಿಂದ ಎಲ್ ಆರ್ ಡಿಇ ಜಂಕ್ಷನ್, ಜಯಮಹಲ್ ರಸ್ತೆ ಹಾಗೂ ಪ್ಯಾಲೇಸ್ ಸುತ್ತಮುತ್ತಲಿನ ರಸ್ತೆಗಳ ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.