ಈಡಿಗ ಸಮುದಾಯಕ್ಕೆ ನೀಡಿದ ಭರವಸೆ ಯನ್ನು ಈಡೇರಿಸುವುದು ನಮ್ಮಸರಕಾರದ ಜವಾಬ್ದಾರಿ:ಡಿ.ಕೆ ಶಿವಕುಮಾರ್
ಬೆಂಗಳೂರು: ದ 10,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಈಡಿಗ ಸಮುದಾಯದ ಪಾತ್ರವೂ ಮಹತ್ವದ್ದಾಗಿದೆ. ಅದಕ್ಕೆ ನಾನು ಆಭಾರಿಯಾಗಿದ್ದು, ಈಡಿಗ ಸಮುದಾಯಕ್ಕೆ ಕೊಟ್ಟ ಮಾತನ್ನು ಉಳಿಸಿಕೊಳ್ಳವುದು ನಮ್ಮ ಜವಾಬ್ದಾರಿ. ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮಾತನ್ನು ನಾವು ಮರೆಯುವಂತಿಲ್ಲ. ವಿದ್ಯೆಯಿಂದ ವಿವೇಕರಾಗಬೇಕು, ಸಂಘಟನೆಯಿಂದ ಬಲವಂತರಾಗಬೇಕು ಎನ್ನುವ ಅವರ ಮಾತು ಇಂದಿಗೂ ಪ್ರಸ್ತುತ. ಈಡಿಗ ಸಮುದಾಯದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಅವರ ಏಳಿಗೆಗಾಗಿ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದೆ.