Published
1 year agoon
By
Akkare Newsವಿಟ್ಲ: ಗ್ರಾಹಕರ ಸೋಗಿನಲ್ಲಿ ಬಂದು ವೈನ್ ಶಾಪ್ ನಲ್ಲಿದ್ದ ಮೊಬೈಲ್ ಕಳ್ಳತನ ಮಾಡಿರುವ ಘಟನೆ ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಶ್ರೀರಾಮ್ ವೈನ್ ಶಾಪ್ ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಟ್ಲದ ಬಸ್ ನಿಲ್ದಾಣದ ಬಳಿ ಇರುವ ಶ್ರೀರಾಮ್ ವೈನ್ ಶಾಪ್ ಗೆ ವ್ಯಕ್ತಿಯೊಬ್ಬ ಬಂದಿದ್ದು ಮೊದಲಿಗೆ ಗ್ರಾಹಕರಂತೆ ಬಂದು ಮದ್ಯ ಖರೀದಿಗೆ ಆರ್ಡರ್ ಮಾಡಿ ಟೇಬಲ್ ನಲ್ಲಿದ್ದ ವೈನ್ ಶಾಪ್ ನಲ್ಲಿರುವ ರಾಜೇಶ್ ಎಂಬವರ ಮೊಬೈಲ್ ನ್ನು ಕದ್ದಿದ್ದಾನೆ. ಈ ಕಳ್ಳತನ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.