ಚಿಕ್ಕಮಗಳೂರು : ಬೈನೆ ಮರದ ಆಸೆಗಾಗಿ ಕಾಡಾನೆ ಮನೆ ಮೇಲೆ ಮರ ಬೀಳಿಸಿದ ಘಟನೆ ಮೂಡಿಗೆರೆ ತಾಲೂಕಿನ ದೇವನಗೂಲ್ ಗ್ರಾಮದಲ್ಲಿ ನಡೆದಿದೆ. ಪ್ರಶಾಂತ್ ಎಂಬುವರ ಮನೆ ಮೇಲೆ ಕಾಡಾನೆ ಮರ ಬೀಳಿಸಿದೆ.
ಕಾಡಾನೆಗಳಿಗೆ ಬೈನೇ ಮರ ಅಂದ್ರೆ ತುಂಬಾ ಇಷ್ಟ. ಹೀಗಾಗಿ ಮನೆಯೊಂದರ ಬಳಿ ಬಂದ ಕಾಡಾನೆ ಅಲ್ಲಿದ್ದ ಬೈನೇ ಮರದ ಆಸೆಗಾಗಿ ಮರವನ್ನ ಮನೆ ಮೇಲೆ ಬೀಳಿಸಿದೆ. ಇನ್ನು ಮನೆ ಮೇಲೆ ಮರ ಬಿದ್ರು ಕಾಡಾನೆಗೆ ಹೆದರಿ ಮನೆ ಮಂದಿ ಹೊರಗೆ ಬಂದಿಲ್ಲ.
ಇಡೀ ರಾತ್ರಿ ಮನೆ ಬಾಗಿಲಲ್ಲೇ ಬೈನೇ ಮರ ತಿಂದು ಕಾಡಾನೆ ವಾಪಾಸ್ ಹೋಗಿದೆ. ಮನೆ ಮೇಲೆ ಮರ ಬಿದ್ದಿದ್ರಿಂದ ಸೀಮೆಂಟ್ ಶೀಟುಗಳು ಪುಡಿ ಪುಡಿಯಾಗಿವೆ. ಈಗಾಗಲೇ ಕಾಫಿನಾಡಿನಲ್ಲಿ ಕಾಡಾನೆ ಮೂವರನ್ನು ಬಲಿ ಪಡೆದಿದೆ. ಇದೀಗ ಮತ್ತೆ ಕಾಡಾನೆ ಉಪಟಳ ಹೆಚ್ಚಾಗಿದ್ದು, ಜನ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.