ನಮ್ಮೊಂದಿಗೆ ಸಂಪರ್ಕ ಸಾಧಿಸಿ

ತಂತ್ರಜ್ಞಾನ

ಹಾಸನ ಜಂಕ್ಷನ್ ರೈಲು ನಿಲ್ದಾಣ ಯಾರ್ಡ್ ಕಾಮಗಾರಿ ಹಿನ್ನೆಲೆ:ಡಿ.14-22:ಮಂಗಳೂರು- ಬೆಂಗಳೂರು ರೈಲುಗಳ ಸಂಚಾರ ವ್ಯತ್ಯಯ

Published

on

ಹಾಸನ ಜಂಕ್ಷನ್ ರೈಲು ನಿಲ್ದಾಣ ಯಾರ್ಡ್ ಕಾಮಗಾರಿ ಹಿನ್ನೆಲೆ:ಡಿ.14-22:ಮಂಗಳೂರು- ಬೆಂಗಳೂರು ರೈಲುಗಳ ಸಂಚಾರ ವ್ಯತ್ಯಯ ಮಂಗಳೂರು ಹಾಸನ ಜಂಗ್ಟನ್ ರೈಲು ನಿಲ್ದಾಣ ಯಾರ್ಡ್ ಮೇಲ್ದರ್ಜೆಗೇರಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಡಿ.14ರಿಂದ 22ರ ತನಕ ಮಂಗಳೂರು-ಬೆಂಗಳೂರು ಮಾರ್ಗದ ಬಹುತೇಕ ಎಲ್ಲ ರೈಲುಗಳ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದೆ.

ಈ ಅವಧಿಯಲ್ಲಿ ಹಾನನ ಜಂಕ್ಷನ್ ಯಾರ್ಡ್ ನಲ್ಲಿ ಸಿಗ್ನಲಿಂಗ್, ಇಂಟರ್ಲಾಕ್ ಹಾಗೂ ವಿವಿಧ ಇಂಜಿನಿಯರಿಂಗ್ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸಲು ರೈಲ್ವೆ ಸಚಿವಾಲಯವು ಅನುಮತಿ ನೀಡಿದೆ ಎಂದು ನೈರುತ್ಯ ರೈಲ್ವೆ ಪ್ರಿನ್ಸಿಪಲ್ ಚೀಫ್ ಮ್ಯಾನೇಜರ್ (ಕಾರ್ಯಾಚರಣೆ) ಅವರು ಹೊರಡಿಸಿದ ಅಧಿಸೂಚನೆಯಲ್ಲಿ ರೈಲು ಸಂಖ್ಯೆ 16511 ಬೆಂಗಳೂರು-ಮಂಗಳೂರು-ಕಣ್ಣೂರು ಮತ್ತು ರೈಲು ಸಂಖ್ಯೆ 16595 ಬೆಂಗಳೂರು-ಕಾರವಾರ ಪಂಚಗಂಗಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಅನ್ನು ಡಿಸೆಂಬರ್ 16ರಿಂದ ಡಿಸೆಂಬರ್ 20ರ ತನಕ ರದ್ದುಗೊಳಿಸಲಾಗಿದೆ.

ರೈಲು ಸಂಖ್ಯೆ 16512 ಕಣ್ಣೂರು- ಮಂಗಳೂರು- ಬೆಂಗಳೂರು ಮತ್ತು ರೈಲು ಸಂಖ್ಯೆ 16596 ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸೆಸ್‌ನ್ನು ಡಿ.17ರಿಂದ ಡಿ.21ರತನಕ ರದ್ದುಗೊಳಿಸಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement