ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಂತರರಾಷ್ಟ್ರೀಯ

ದೇಶದ ಹೆಸರಾಂತ ಉದ್ಯಮಿ jsw ಎಂಡಿ ಸಜ್ಜನ್ ಜಿಂದಾಲ್ , ಖ್ಯಾತ ನಟಿಯ ಅತ್ಯಾಚಾರ ಪ್ರಕರಣ.

Published

on

ಮುಂಬೈ: ಸ್ಟೀಲ್ ದೈತ್ಯ jsw ಸಮೂಹದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಸಜ್ಜನ್ ಜಿಂದಾಲ್ (Sajjan Jindall) ವಿರುದ್ಧ ಮುಂಬಾಯಿಯ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ನಟಿಯೊಬ್ಬರು ನೀಡಿದ ದೂರಿನಂತೆ ನ್ಯಾಯಾಲಯದ ಆದೇಶದ ಮೇರೆಗೆ ಬಿಕೆಸಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು. 2022 ರ ಜನವರಿಯಲ್ಲಿ ಆರೋಪಿ ಸಜ್ಜನ್ ಜಿಂದಾಲ್ ಚಾಂದ್ರಾ-ಕುರ್ಲಾ ಕಾಂಪ್ಲೆಕ್ನಲ್ಲಿರುವ ಕಂಪನಿಯ ಮುಖ್ಯ ಕಚೇರಿಯ ಮೇಲಿನ ಪೆಂಟಾ ಹೌಸ್ ನಲ್ಲಿ ನನ್ನ ವಿರೋಧದ ನಡುವೆಯೇ ಅತ್ಯಾಚಾರ ಎಸಗಿರುವುದಾಗಿ ನಟಿ ಆರೋಪಿಸಿದ್ದಾರೆ.ಈ ಬಗ್ಗೆ ಈ ವರ್ಷದ ಆರಂಭದಲ್ಲಿ (2023ರ ಜನವರಿಯಲ್ಲಿ ) ನಟಿ ಬಿಕೆಸಿ ಪೊಲೀಸರಿಗೆ ದೂರು ನೀಡಿದ್ದು ಅವರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದರು. ಹೀಗಾಗಿ ಸಂತ್ರಸ್ತೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯವು ಪ್ರಕರಣ ದಾಖಲಿಸುವಂತೆ ಪೊಲೀಸ್ ಠಾಣೆಗೆ ಸೂಚಿಸಿದ್ದು ಇದೀಗ FIR ದಾಖಲಾಗಿದೆ.

ಅಕ್ಟೋಬರ್ 2021 ರಲ್ಲಿ ದುಬೈನ ಕ್ರೀಡಾಂಗಣವೊಂದರ ವಿಜಪಿ ಬಾತ್ ನಲ್ಲಿ ಐಪಿಎಲ್ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ನಟಿ ಜಿಂದಾಲ್ ಅವರನ್ನು ಮೊದಲ ಬಾರಿಗೆ ಭೇಟಿಯಾದರು. ನಂತರ ಜೈಪುರದಲ್ಲಿ ನಂಸದ ಪ್ರಫುಲ್ ಪಟೇಲ್ ಅದರ ಪುತ್ರನ ಮದುವೆಯಲ್ಲಿ ಭೇಟಿಯಾದರು. ಈ ವೇಳೆ ಜಿಂದಾಲ್ ನನ್ನೊಂದಿಗೆ ಸ್ನೇಹ ಬೆಳೆಸಿದರು ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.ದುಬೈನಲ್ಲಿ ರಿಯಲ್ ಎಸ್ಟೇಟ್ ಸಲಹೆಗಾರರಾಗಿರುವ ನನ್ನ ಸಹೋದರನಿಂದ ಅಸ್ತಿ ಖರೀದಿಸಲು ಜಿಂದಾಲ್ ಆಸಕ್ತಿ ವ್ಯಕ್ತಪಡಿಸಿದ್ದರಿಂದ ನಾವು ಮೊಬೈಲ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡೆವು ಹಾಗು ಮುಂಬೈನಲ್ಲಿ ಭೇಟಿಯಾಗಿದ್ದೆವು’ ಎಂದು ದೂರಿನಲ್ಲಿ ತಿಳಿಸಲಾಗಿದೆ.



ಬಳಿಕದ ದಿನಗಳಲ್ಲಿ ನಮ್ಮ ನಡುವೆ ಮೊಬೈಲ್ ಚ್ಯಾಟಿಂಗ್ ನಡೆದಿದ್ದು, ಈ ವೇಳೆ ಜಿಂದಾಲ್ ಮದುವೆಯಾಗಿದ್ದರೂ ನನ್ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡರು. ಅಲ್ಲದೇ ನನ್ನನ್ನು ಚುಂಬಿಸಲು ಪ್ರಯತ್ನಿಸಿದರು ಮತ್ತು ದೈಹಿಕವಾಗಿ ನಿಕಟವಾಗುವ ಬಗ್ಗೆ ಮಾತನಾಡಿದರು. ಅದರೇ ನಾನು ಇದನ್ನು ತಿರಸ್ಕರಿಸಿದ್ದು, ಇದು ಎಲ್ಲವು ಮದುವೆಯ ಬಳಿಕವಷ್ಟೆ ಸಾದ್ಯ ಎಂದು ತಿಳಿಸಿದ್ದೆ ಎಂದು ದೂರಿನಲ್ಲಿ ತಿಳಿಸಿದೆ.ಜನವರಿ 2022 ರಲ್ಲಿ, ಸಂತ್ರಸ್ತೆಯು ಜಿಂದಾಲ್ ಕಂಪನಿಯ ಪ್ರಧಾನ ಕಚೇರಿಯಲ್ಲಿ ಸಭೆಯೊಂದರಲ್ಲಿ ಭಾಗವಹಿಸಲು ಹೋಗಿದ್ದು, ಈ ವೇಳೆ ಜಿಂದಾಲ್ ಅವಳನ್ನು ಪೆಂಟಾ ಹೌಸ್ ಗೆ ಕರೆದು ಕೊಂಡು ಹೋಗಿದ್ದಾರೆ. ಈ ವೇಳೆ ನನ್ನ ನಿರಂತರ ಪ್ರತಿಭಟನೆಗಳು ಮತ್ತು ನಿರಾಕರಣೆಗಳ ಹೊರತಾಗಿಯೂ, ಜಿಂದಾಲ್ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ನಟಿ ಗಂಭೀರ ಆರೋಪ ಮಾಡಿದಾರೆ.
ಘಟನೆಯ ನಂತರವೂ ತಾನು ಅವನೊಂದಿಗೆ ಸ್ನೇಹವನ್ನು ಮುಂದುವರಿಸಲು ಬಯಸಿದೆ. ಆದರೆ ಅವರು ರಿಪ್ಪೆ ಕೊಡುವುದನ್ನು ನಿಲ್ಲಿಸಿದ್ದು, ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದರು ಎಂದು ದೂರುದಾರರು ಹೇಳಿದ್ದಾರೆ. ಜೂನ್ 2022 ರಲ್ಲಿ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡುವ ಮೊದಲು ಪೊಲೀಸರನ್ನು ಸಂಪರ್ಕಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜಿಂದಾಲ್, ನಟಿಗೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ

Continue Reading
Click to comment

Leave a Reply

Your email address will not be published. Required fields are marked *

Advertisement