ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಉದ್ಯೋಗ

ರೈತರಿಗೆ ವರದಾನವಾದ ಬೆಳೆ ವಿಮೆ. ಕೃಷಿಕರ ಖಾತೆಗೆ ಬಂತು ಬೆಲೆ ವಿಮೆ ಹಣ.ಶಾಸಕ ಅಶೋಕ್ ಕುಮಾರ್ ರೈ

Published

on

ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿಸಿಕೊಂಡ ಕೃಷಿಕರಿಗೆ ಮಂಗಳವಾರ ಶುಭ ದಿನ. ಯಾಕೆಂದರೆ ಕೃಷಿಕರ ಖಾತೆಗೆ ನಿರೀಕ್ಷೆಗೂ ಮೀರಿ ಹಣ ಜಮೆಯಾಗಿದ್ದು ಕೃಷಿಕರ ಮೊಗದಲ್ಲಿ ಸಂತಸದ ಕಳೆ ತುಂಬಿದೆ. ಈ 4 ಸಂತಸಕ್ಕೆ ಕಾರಣರಾದವರು ಪುತ್ತೂರು ಶಾಸಕರು. ಬೆಳೆ ವಿಮೆ ಕೃಷಿಕರಿಗೆ ಇನ್ನೂ ಸಿಕ್ಕಿಲ್ಲ, ಎಲ್ಲಾ ಜಿಲ್ಲೆಗಳಲ್ಲೂ ಈಗಾಗಲೇ ನೀಡಲಾಗಿದೆ ಎಂದು ಆರೋಪದ ಮಧ್ಯೆ ಕಳೆದ ಅಧಿವೇಶನದಲ್ಲಿ ಶಾಸಕರು ಈ ವಿಚಾರದಲ್ಲಿ unre ಸರಕಾರದ ಗಮನ ಸೆಳೆದಿದ್ದರು. ವಾರದೊಳಗೆ ವಿಮೆ ಪಾವತಿಯಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದರು. ಮಂಗಳವಾರದಂದು ವಿಮೆ ಮಾಡಿಸಿಕೊಂಡ ಕೃಷಿಕರ ಖಾತೆಗೆ ನಿರೀಕ್ಷೆಗೂ ಮೀರಿ ಹಣ ಜಮೆಯಾಗಿದೆ.
ಹವಾಮಾನ ಆಧಾರಿತ ಮತ್ತು ಬೆಳೆ ವಿಮೆ ಈ ಎರಡೂ ವಿಮೆಯನ್ನು ಕೃಷಿಕರು ಮಾಡಿಸಿಕೊಂಡಿದ್ದರು. ಹವಾಮಾನ ಆಧಾರಿತ ವಿಮೆಗೆ ಅಡಿಕೆ ಮತ್ತು ಬೆಳೆ ವಿಮಾ ವ್ಯಾಪ್ತಿಗೆ ಕಾಳುಮೆಣಸು ಒಳಪಟ್ಟಿತ್ತು. ಹೆಕ್ಟೇರ್‌ಗೆ 6 li ಸಾವಿರದಂತೆ ಕೃಷಿಕರು ವಿಮಾ ಮೊತ್ತವನ್ನು ಪಾವತಿಸಿದ್ದು ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟು ವಿಮೆ ಮಂಜೂರಾಗಿದೆ.

6 ಸಾವಿರ ವಿಮಾ ಕಂತು ಪಾವತಿಸಿದ ಕೃಷಿಕರ ಖಾತೆಗೆ 40 ಸಾವಿರ ವಿಮಾ ಮೊತ್ತ ಜಮೆಯಾಗಿದ್ದು ದುಪ್ಪಟ್ಟು ಎಂದೇ ಹೇಳಲಾಗಿದೆ.ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಅಡಕೆ ಒಳಪಟ್ಟಿದ್ದು ರೋಗ, ಹವಾಮಾನ ವೈಪರೀತ್ಯ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಕೃಷಿಕರು ಬೆಳೆ ನಷ್ಟ ಅನುಭವಿಸಿದ್ದರೆ ಅವರಿಗೆ ಸರಕಾರದಿಂದ ಹವಾಮಾನ ಆಧರಿತ ಬೆಳೆ ವಿಮೆಯಿಂದ ಪರಿಹಾರವನ್ನು ನೀಡಲಾಗುತ್ತದೆ. ಬೆಳೆ ವಿಮಾ ವ್ಯಾಪ್ತಿಗೆ ಕರಾವಳಿ ಜಿಲ್ಲೆಗಳಲ್ಲಿ ಕಾಳುಮೆಣಸು ಒಳಪಟ್ಟಿದ್ದು ಬೆಳೆ ವಿಮೆ ಮಾಡಿಸಿಕೊಂಡವರ ಖಾತೆಗೆ ಲಕ್ಷ ಲಕ್ಷ ಹಣ ಜಮೆಯಾಗಿದ್ದು ಕೃಷಿಕರು ಪುಲ್ ಖುಷಿಯಲ್ಲಿದ್ದಾರೆ.ಹವಾಮಾನ ಆಧಾರಿತ ಬೆಳೆ ವಿಮೆಯು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೃಷಿಕರಿಗೆ ಸಿಕ್ಕಿರಲಿಲ್ಲ. ಈ ಬಗ್ಗೆ ಈ ಭಾಗದ ಕೃಷಿಕರು ನನ್ನ ಗಮನಕ್ಕೆ ತಂದಿದ್ದರು. ಕಳೆದ ಅಧಿವೇಶನದಲ್ಲಿ ಈ ವಿಚಾರವನ್ನು ಸಚಿವರ ಗಮನಕ್ಕೆ ತಂದು ಕೂಡಲೇ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೆ. ಒಂದು ವಾರದೊಳಗೆ ವಿಮಾ ಪರಿಹಾರವನ್ನು ನೀಡಲಾಗುತ್ತದೆ ಎಂದು ಸಚಿವರು ಭರವಸೆಯನ್ನು ನೀಡಿದ್ದರು.



ಅದರಂತೆ ಡಿ.19 ರಂದು ಪುತ್ತೂರು ಕ್ಷೇತ್ರ ವ್ಯಾಪ್ತಿಯ ಕೃಷಿಕರ ಖಾತೆಗೆ ವಿಮಾ ಪಾವತಿಯಾಗಿದೆ. ಕೃಷಿಕರಲ್ಲಿ ಸಂತಸದ ಅಲೆ ಇದೆ, ಕೃಷಿಕರು ಸಮೃದ್ದರಾದರೆ ಎಲ್ಲರಿಗೂ ಸಂತೋಷ. ಅಡಿಕೆ ಎಲೆ ಚುಕ್ಕಿ ರೋಗಕ್ಕೂ ಸರಕಾರ ಪರಿಹಾರ ಕೊಡಬೇಕೆಂದು ಮನವಿ ಮಾಡಿದ್ದೇನೆ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರ ಪರಿಹಾರ ನೀಡಬಹುದು ಅಥವಾ ಎಲೆ ಚುಕ್ಕಿ ರೋಗಕ್ಕೆ ಔಷಧಿಯನ್ನಾದರೂ ಕಂಡು ಹಿಡಿಯಬಹುದು ಎಂಬ ವಿಶ್ವಾಸ ನನಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾ‌ರ್ ರೈ ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement