ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಉಡುಪಿ

ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ದಂಪತಿಗೆ ನುಡಿ ನಮನ.

Published

on

ಕಾಪು: ಇತ್ತೀಚೆಗೆ ಅಗಲಿದ ಕೆ. ಲೀಲಾಧರ ಶೆಟ್ಟಿ ಮತ್ತು ವಸುಂಧರಾ ಶೆಟ್ಟಿ ಅವರಿಗೆ ಸಾರ್ವಜನಿಕ ನುಡಿನಮನ ಸಮರ್ಪಣೆ ಸಹಿತ ಶ್ರದ್ಧಾಂಜಲಿ ಸಭೆಯು ಸೋಮವಾರ ಕಾಪು ಬಂಟರ ಸಂಘದ ಅಂಬಾ ಮಹಾಬಲ ಶೆಟ್ಟಿ ಆವರಣದಲ್ಲಿ ನಡೆಯಿತು. ಉಡುಪಿ ಶ್ರೀ ಅನಂತೇಶ್ವರ ದೇವ ಸ್ಥಾನದ ಪ್ರಧಾನ ಅರ್ಚಕ ವೇ| ಮೂ| ವೇದವ್ಯಾಸ ಐತಾಳ ನುಡಿನಮನ ಸಲ್ಲಿಸಿ, ಮಗುವನ್ನೂ ಪ್ರೀತಿಯಿಂದ ಕರೆದು ಗೌರವದಿಂದ ಮಾತನಾಡಿಸುತ್ತಿದ್ದ ಲೀಲಾಧರ ಸರ್ವ ಜಾತಿ, ಮತ, ಧರ್ಮ ಪಂಥದವರಿಗೆ ಬೇಕಾದವರಾಗಿದ್ದರು. ಅವರ ಅಗಲುವಿಕೆಯನ್ನು ಅರಗಿಸಿ ಕೊಳ್ಳುವುದು ಕಷ್ಟ ಸಾಧ್ಯ, ನಾವೆಲ್ಲರೂ ಸೇರಿ ಅವರಿಗೆ ವಿಷ್ಣು ಸಾಯುಜ್ಯ ಪ್ರಾಪ್ತವಾಗಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದರು. ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಮಾನವ ಜನ್ಮ ದೈವಚಿತ್ತದ ಕೊಡುಗೆಯಾಗಿದ್ದು ಇಲ್ಲಿ ಬದುಕಿದಷ್ಟು ದಿನ ಉತ್ತಮರಾಗಿ ಬದುಕಿ, ಜನರಿಗಾಗಿ ತಮ್ಮ ಜೀವನವನ್ನು ತೇಯ್ದ ಲೀಲಣ್ಣ ಇಚ್ಛಾಮರಣಿಯಾಗಿ ನಮ್ಮನ್ನು ಅಗಲಿ ರುವುದು ಅರಗಿಸಿಕೊಳ್ಳಲಾಗದ ಸತ್ಯ.



ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ಅವರ ಕನಸುಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ಹೊತ್ತುಕೊಳ್ಳೋಣ ಎಂದರು. ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಮಾತನಾಡಿ, ಲೀಲಾಧರ ಅವರ ಎಲ್ಲ ಸೇವಾ ಕಾರ್ಯಗಳನ್ನು ಸಮಾಜ ಸ್ವೀಕರಿಸಿತ್ತು. ಅವರನ್ನು ಮತ್ತು ಅವರು ಮಾಡಿದ ಸೇವಾ ಕಾರ್ಯಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಮಜೂರು ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್‌ ರಶೀದ್‌ ಸಖಾಫಿ, ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಅಲನ್‌ ರಾಡ್ರಿಗಸ್‌ ಮೊದಲಾದವರು ಮಾತನಾಡಿದರು. ಅಧ್ಯಕ್ಷತೆಯನ್ನು ಕಾಪು ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ವಹಿಸಿದ್ದರು. ಲೀಲಾಧರ ಶೆಟ್ಟಿ ಅವರ ಸಹೋದರಿ ಯರಾದ ನಿರ್ಮಲಾ ವಿಠಲ ಶೆಟ್ಟಿ, ಗಂಗಾ ಭುಜಂಗ ಶೆಟ್ಟಿ, ವಿಠಲ ಶೆಟ್ಟಿ, ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಕುಟುಂಬಸ್ಥರು, ಸಂಘಟಕರು, ಸಾವಿರಾರು ಅಭಿಮಾನಿಗಳು, ಹಿತೈಷಿಗಳು, ಪಾಲ್ಗೊಂಡಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement